ವಿಶೇಷ ಪೂಜೆಗಳು
ಮುಳಬಾಗಲು: ಪಟ್ಟಣದ ಸೋಮೇಶ್ವರಪಾಳ್ಯದ ಸೋಮೇಶ್ಸರಸ್ವಾಮಿ, ಉದ್ಭವಶಿವಲಿಂಗೇಶ್ವರ, ಗಣೇಶಪಾಳ್ಯದ ಶಂಕರತೀರ್ಥ ಮಠದಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ನಡೆಯಿತು. ಸಾವಿರಾರು ಮಂದಿ ಭಕ್ತಾಧಿಗಳು ದೇವರ ದರ್ಶನ ಪಡೆದರು. ತಾಲೂಕಿನ ಪ್ರಸಿದ್ಧ ಶೈವ ಕ್ಷೇತ್ರವಾದ ಆವಣಿ ರಾಮಲಿಂಗೇಶ್ವರಸ್ವಾಮಿ, ವಿರೂಪಾಕ್ಷಿಯ ವಿರೂಪಾಕ್ಷೀಶ್ವರಸ್ವಾಮಿ, ಕುರುಡುಮಲೆ ಸೋಮೇಶ್ವರಸ್ವಾಮಿ, ಗುಜ್ಜಮಾರಾಂಡಹಳ್ಳಿ ಶಿವದೇವಾಲಯ, ಮೂಡಿಯನೂರು, ಕೋಲದೇವಿ ಗ್ರಾಮಗಳ ಶಿವದೇವಾಯಗಳಲ್ಲಿ ಶಿವರಾತ್ರಿ ಪರ್ವ ದಿವಸದ ಪ್ರಯುಕ್ತವಾಗಿ ವಿಶೇಷ ಪೂಜೆಗಳು ನಡೆಯಿತು. ಸಾವಿರಾರು ಜನ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.