ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅಧಿಕಾರಿಗಳು ಸಹಾಯ ಗುಣ ಬೆಳೆಸಿಕೊಳ್ಳಿ'

Rashmi Kasaragodu
Updated On : 1 Mar 2014, 12:59 pm

ಬಂಗಾರಪೇಟೆ: ಅಧಿಕಾರಿಗಳು ತಮ್ಮ ಇತಿಮಿತಿಯೊಳಗೆ ರೈತರಿಗೆ ಸಹಾಯ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ವಿ. ಮಹೇಶ್ ಹೇಳಿದರು.
ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಿವೃತ್ತಿ ಪಡೆದ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಯ ವಿವಿಧ ಪದಾಧಿಕಾರಿಗಳು ತಮ್ಮ ಅನಿಸಿಕೆ, ಅನುಭವ ಹಂಚಿಕೊಂಡರು. ಆಂಜನೇಯ ಗೌಡ ನಿವೃತ್ತ ಅಧಿಕಾರಿಗಳ ಸೇವೆ ಕುರಿತು ವರದಿ ಮಂಡಿಸಿದರು. ಉಪಾಧ್ಯಕ್ಷ ತಿಮ್ಮರಾಯ ನಾಯ್ಕ, ಕಾರ್ಯದರ್ಶಿ ರಾಮದೇವ್, ನಿರ್ದೇಶಕ ಅಮರ ನಾರಾಯಣರೆಡ್ಡಿ, ಅಶ್ವತ್ಥ್, ಶ್ರೀನಿವಾಸ್, ಜ್ಯೋತೇನಹಳ್ಳಿ ರಾಮಪ್ಪ, ಮಂಜುನಾಥರೆಡ್ಡಿ, ದಶರಥರೆಡ್ಡಿ, ಲಕ್ಷ್ಮಿದೇವಿ, ಜಿ.ಎಸ್. ಶಿವಶಂಕರ್, ಸೀತಾರಾಮಪ್ಪ ಇದ್ದರು. ಸಮಾರಭಕ್ಕೆ ಮುನ್ನ ಎಪಿಎಂಸಿ ಆವರಣದಲ್ಲಿ 14 ಲಕ್ಷ ವೆಚ್ಚದ 100 ಮೆಟ್ರಿಕ್ ಟನ್ ಸಾಮರ್ಥ್ಯದ ದಾಸ್ತಾನು ಮಳಿಗೆಗೆ ಎಪಿಎಂಸಿ ಅಧ್ಯಕ್ಷ ಬಿ.ವಿ. ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement