ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಂದು ವಿಗ್ರಹಗಳ ಪ್ರತಿಷ್ಠಾಪನೆ

Rashmi Kasaragodu
Updated On : 1 Mar 2014, 12:57 pm

ಕೋಲಾರ: ತಾಲೂಕಿನ ಯಳಚೀಪರ ಗ್ರಾಮದಲ್ಲಿ ಶ್ರೀ ವೇಣುಗೋಪಾಲಸ್ವಾಮಿ, ವಿಘ್ನೇಶ್ವರ, ನಾಗದೇವತೆ, ಆಂಜನೇಯಸ್ವಾಮಿ, ಮತ್ತು ಮಾರಿಕಾಂಬ ನೂತನ ದೇವಾಲಯ ಹಾಗೂ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಮಾ.1 ಶನಿವಾರದಿಂದ 3 ರ ಸೋಮವಾರದವರೆಗೆ ನಡೆಯಲಿವೆ.
ಮಾ. 1ರಂದು ಸಂಜೆ 4.30ರಿಂದ 8.30ರವರೆಗೆ ಆಚಾರ ಯವರ್ಣಂ, ಪುಣ್ಯಾಹಂ, ಪಶುದಾನಂ, ಬಿಂಬ ಪರಿಗ್ರಹಂ, ವಾಸ್ತು ಹೋಮ, 2 ರಂದು ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, ರಾಜಗೋಪಾಲ ಹೋಮ, ಕಳಶಪೂಜೆ, ಸಂಜೆ 5ಕ್ಕೆ ಜಲಾದಿವಾಸ, ನಿದ್ರಾಕಳಶಪೂಜಾ, ಶಯಾಪೂಜಾ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಮಾ.3 ರಂದು ಬೆಳಿಗ್ಗೆ 10 ಗಂಟೆಗೆ ವೇಣುಗೋಪಾಲಸ್ವಾಮಿ ಪ್ರತಿಷ್ಠಾಪನೆ ಕುಂಭಾಭಿಷೇಕದ ಉದ್ಘಾಟನೆಯನ್ನು ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದಸ್ವಾಮೀಜಿ ನೆರವೇರಿಸುವರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕರಾದ ವರ್ತೂರು ಆರ್. ಪ್ರಕಾಶ್, ರಮೇಶ್ ಕುಮಾರ್, ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಡಿ.ಕೆ. ರವಿ, ಸಹಾಯಕ ಕಮೀಷನರ್ ಸಿ.ಎನ್. ಮಂಜುನಾಥ್, ತಹಸೀಲ್ದಾರ್ ಜಿ.ಆರ್. ನಾಗರಾಜ್ ಭಾಗವಹಿಸಿಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement