ಈಶ್ವರನ ಪ್ರತಿರೂಪ ಸಾಯಿನಾಥ
ಮಾಲೂರು: ಈಶ್ವರನ ಪ್ರತಿರೂಪವಾಗಿರುವ ಸಾಯಿನಾಥನ ಮಹತ್ವ ಅತೀತವಾಗಿದ್ದು, ಸಾಯಿ ಬಾಬಾ ಗುರುವಿನಲ್ಲಿ ದೇವರ ಕಾಣಬಹುದಾಗಿದೆ ಎಂದು ಶಿರಡಿ ಬಾಬಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಹೇಳಿದರು.
ತಾಲೂಕು ಕಚೇರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಖಂಡ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಯುಗದಲ್ಲಿ ಈಶ್ವರನ ಪ್ರತಿರೂಪದಂತಿರುವ ಸಾಯಿನಾಥ ನೊಂದ ಮನಸ್ಸಿಗೆ ಶಾಂತಿ ನೀಡುವ ಶಾಂತಿಧೂತನಾಗಿದ್ದು, ಪ್ರತಿಯೊಬ್ಬರು ಸಾಯಿ ಭಜನೆ ಮಾಡಬೇಕು ಎಂದರು. ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ರ ವರೆಗೆ ನಡೆದ ಭಜನೆ ನಂತರ ಸಾಯಿನಾಥರಿಗೆ ಕಾಕಡಾರತಿ ಮಾಡಲಾಯಿತು. ಟ್ರಸ್ಟ್ನ ಆಂಜನೇಯ ರೆಡ್ಡಿ, ನಾರಾಯಣರೆಡ್ಡಿ, ಶ್ರೀನಾಥ್ರೆಡ್ಡಿ, ಜೈಭಾರತಮ್ಮ, ಬೇಬಿರಾಣಿ, ಭಾಗ್ಯಮ್ಮ, ಅನುಸೂಯಮ್ಮ, ನಿರ್ಮಲಮ್ಮ, ರಾಘವೇಂದ್ರ, ಗಜೇಂದ್ರ, ವಾಸುದೇವ, ಮಂಜು, ಸುರೇಶ್, ಲಿಖಿತ್, ಮಣಿ, ರವಿ, ಚಂದಿರ್, ಉಜ್ವಲ್ ಇದ್ದರು.