ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಲೆ ಹೃದಯ ವೈಶಾಲ್ಯತೆ ಬೆಳೆಸುವ ಸಾಧನ

Rashmi Kasaragodu
Updated On : 1 Mar 2014, 1:00 am

ಚಿಂತಾಮಣಿ: ಕಲೆ ಮಾನವನಲ್ಲಿ ಹೃದಯ ವೈಶಾಲ್ಯತೆಯನ್ನು ಬೆಳೆಸುವ ಸಾಧನ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು. ತಾಲೂಕಿನ ಕೈವಾರದ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಭಾರತೀಯ ಪರಂಪರೆ, ಸಂಗೀತ, ಸಂಸ್ಕೃತಿ, ಕಲೆ ಬಿಂಬಿಸುವ ನಾಡು ನುಡಿ ಗೀತೆ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಲೆ ಮಾನವನಿಗೆ ಮಾನವೀಯತೆ, ಜೀವನದ ಮೌಲ್ಯ, ಜ್ಞಾನ ಮತ್ತು ಸಹಿಷ್ಣುತೆಗಳನ್ನು ಬೋಧಿಸುತ್ತದೆ. ಕರ್ನಾಟಕ ಸಂಸ್ಕೃತಿ ಬೆಳವಣಿಗೆಯ ಇತಿಹಾಸ ಅರಿಯಬೇಕಾದರೆ ನಮ್ಮಲ್ಲಿ ಬೆಳೆದು ಬಂದ ಕಲೆಗಳನ್ನು ಅಧ್ಯಯನ ಮಾಡಬೇಕಾದ್ದು ಅನಿವಾರ್ಯವೆನಿಸುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು. ಹುಟ್ಟುಹಬ್ಬದಂದು ಒಂದೊಂದು ಕನ್ನಡ ಪುಸ್ತಕ ಕೊಂಡುಕೊಳ್ಳಿ ಎಂದರು. ಮೂರು ದಿನಗಳು ನಡೆದ ಈ ಅಭಿಯಾನದಲ್ಲಿ ಬೆಂಗಳೂರಿನ ಗಾಯಕಿ ಜ್ಯೋತಿರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಕನ್ನಡ ಗೀತೆಗಳ ಗಾಯನವನ್ನು ಹೇಳಿಕೊಟ್ಟರು. ಇವರಿಗೆ ಕಲಾವಿದರಾದ ಸುಮ ಮತ್ತು ಅನಿರುದ್ದ ಸಹಕರಿಸಿದರು. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶಿವಾರೆಡ್ಡಿ, ಸುರೇಶ್, ಶಿಕ್ಷಕರಾದ ಶೋಭಾ, ವಿಜಯಲಕ್ಷ್ಮಿ, ಸೌಮ್ಯಲತಾ, ಪರಿಮಲ, ಅಯಿಷಾಖಾನಂ, ಶ್ರೀನಾಥ್ ಇದ್ದರು.
ಜೆಸಿಬಿ ಬಳಸಿ ನರೇಗಾ ಕಾಮಗಾರಿ: ದೂರು
ಕೋಲಾರ: ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ಕುಂಟೆಯನ್ನು ಪುನಶ್ಚೇತನಗೊಳಿಸಲು ಎನ್.ಆರ.ಜಿ. ಯೋಜನೆಯಡಿ ಅನುದಾನ ಬಿಡುಗಡೆಯಗಿದ್ದು ಕೂಲಿಕಾರ್ಮಿಕರಿಂದ ಕೆಲಸ ಮಾಡಿಸದೆ ನಿಯಮಗಳನ್ನು ಉಲ್ಲಂಘಸಿ ಜೆ.ಸಿ.ಬಿ ಯಂತ್ರಗಳ ಮೂಲಕ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥ ಕೆ.ಎನ್. ವೆಂಕಟಶಾಮರೆಡ್ಡಿ ಹಾಗೂ ಗ್ರಾಮಸ್ಥರು ಜಿಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಈ ಮೊದಲು ಕೆರೆಯಲ್ಲಿ ಉಳಿದಿದ್ದ ನೀರನ್ನು ಹೊರಗಡೆ ಪಂಪ್ ಮಾಡಿ ಗ್ರಾಮದ ರಾಸುಗಳಿಗೆ ಹಾಗೂ ಇತರೆ ಕೆಲಸಗಳಿಗೆ ಉಪಯೋಗಿಸಲು ನೀರಿಲ್ಲದಂತೆ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಕುಡಿಯಲು ನೀರಿಲ್ಲದೆ ಸುಮಾರು ವರ್ಷಗಳ ಹಿಂದೆ ಕೊರೆಸಿದ್ದ ಕೊಳವೆ ಭಾವಿಯಿಂದ ಬರುವ ಅಲ್ಪಸ್ವಲ್ಪ ಬರುತ್ತಿರುವ ನೀರಿಗಾಗಿ ಆಹೋರಾತ್ರಿ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಹಲವು ಬಾರಿ ದೂರು ನೀಡಿದ್ದರೂ ಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement