ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚುತುಷ್ಪಥ ರಸ್ತೆ ಅಭಿವೃದ್ಧಿಗೆ ಸಹಕಾರ: ರೋಷನ್ ಬೇಗ್

Rashmi Kasaragodu
Updated On : 1 Mar 2014, 12:57 pm

ಗೌರಿಬಿದನೂರು: ಯಲಹಂಕ ಮತ್ತು ಗೌರಿಬಿದನೂರು ಆಂಧ್ರದ ಗಡಿ ಕುಡುಮಲಕುಂಟೆವರೆಗೆ ನಾಲ್ಕು ಪಥಗಳ ರಸ್ತೆಗೆ ಮೂಲಭೂತ ಸೌಕರ್ಯ ಇಲಾಖೆಯಿಂದ ಸಹಕಾರ ನೀಡುವುದಾಗಿ ಸಚಿವ ರೋಷನ್ ಬೇಗ್ ಭರವಸೆ ನೀಡಿದರು.
ಪಟ್ಟಣದ ಎಚ್.ಎನ್. ಕಲಾಮಂದಿರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ಬಂಡವಾಳ ಹೂಡಿಕೆ ದಾರರ ಸಮಾವೇಶ ಉದ್ಘಾಟಿಸಿದ ನಂತರ ಮಾತನಾಡಿದರು.
ಜಿಲ್ಲೆ ಋಣ ತೀರಿಸುವೆ: ನಮ್ಮ ತಂದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು, ಚಿಕ್ಕಬಳ್ಳಾಪುರ, ಶಿಢ್ಲಘಟ್ಟ, ಬಾಗೇಪಲ್ಲಿ ಮುಂತಾದಡೆ ಕಾರ್ಯನಿರ್ವಹಿಸಿದ್ದರು. ನಾನು ಆಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ ಆದ್ದರಿಂದ ನನಗೆ ಚಿಕ್ಕಬಳ್ಳಾಪುರದ ಬಗ್ಗೆ ಹೆಚ್ಚಿನ ಆಸಕ್ತಿ ಅಭಿಮಾನ. ಆದ್ದರಿಂದ ಮೂಲ ಸೌಕರ್ಯಗಳನ್ನು ನೀಡುವ ಮೂಲಕ ನನ್ನ ಋಣವನ್ನು ತೀರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ತಿಳಿಸಿದರು.
ರಾಜ್ಯ ಸರ್ಕಾರ ಕಳೆದ 8 ತಿಂಗಳಲ್ಲಿ ಕೇಂದ್ರ ರೇಲ್ವೆ ಯೋಜನೆಯ ರೈಲ್ವೆ ಮಲ್ಸೇತುವೆ ಮತ್ತು ರೈಲ್ವೆ ಒಳಸೇತು ನಿರ್ಮಾಣಕ್ಕೆ 373ಕೋಟಿ ಬಿಡುಗಡೆ ಮಾಡಿದೆ. ಯಲಹಂಕದಿಂದ ಕುಡುಮಲಕುಂಟೆ ವರೆಗೆ ಬೇಕಾಗುವ ನಾಲ್ಕು ಪಥ ರಸ್ತೆಗೆ ಮಧ್ಯೆ ಹಾದುಹೋಗುವ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆಯಾಗಬೇಕು ಹಾಗೂ ಈ ರಸ್ತೆ 6ಪಥವಾದರೆ ಇನ್ನೂ ಉತ್ತಮ ಇಂತಹ ರಸ್ತೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಬಹುದು ಆದರೆ ಸಾರ್ವಜನಿಕರು ಟೋಲ್ ಹಣ ನೀಡದೆ ಅವರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ದೇಶದಾದ್ಯಂತ ನಡೆದಿದೆ ಇದಕ್ಕೆ ನಿಮ್ಮ ಸಹಕಾರ ಮುಖ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement