ದೇಶಭಕ್ತಿ ಮೂಡಿಸಿದ ಕಿತ್ತೂರಿನ ಹುಲಿ ನಾಟಕ
ಗುಡಿಬಂಡೆ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಚಿಕ್ಕಬಳ್ಳಾಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಾದಿಗ ದಂಡೋರ ಸಹಯೋಗದಲ್ಲಿ, ಎಂ.ಸಿ. ವಿಶ್ವನಾಥ್ ಸಾರಥ್ಯದಲ್ಲಿ ನಡೆದ ಕಿತ್ತೂರು ಹುಲಿ ಎಂಬ ನಾಟಕ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎನ್. ನಾರಾಯಣಸ್ವಾಮಿ, ಮಕ್ಕಳಲ್ಲಿ ದೇಶಭಕ್ತಿ ತುಂಬಲು ಈ ನಾಟಕ ಸೂಕ್ತ ವೇದಿಕೆಯಾಗಿದೆ ಎಂದರು. ವೆಂಕಟನಾರಾಯಣರೆಡ್ಡಿ, ಬಾಲಕರ ಪ್ರೌಢಶಾಲೆಯ ಶಿಕ್ಷಕರಾದ ಗಂಗರಾಜು, ಮಂಜುನಾಥ, ಇಸ್ಮಾಯಿಲ್, ಭಾರತಿ ಇದ್ದರು.