ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

Rashmi Kasaragodu
Updated On : 1 Mar 2014, 12:58 pm

ಬಾಗೇಪಲ್ಲಿ: ಗಂಡ ಹೆಂಡತಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೇಳೂರು ಪಟ್ಟಣದಲ್ಲಿ ನಡೆದಿದೆ.
ಶ್ರೀಕಾಂತ್ (27) ಮತ್ತು ಹೆಂಡತಿ ಸೌಜನ್ಯ ಅಲಿಯಾಸ್ ಸ್ವಾತಿ(25) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವವರು.
ಶ್ರೀಕಾಂತ್ ಮತ್ತು ಸೌಜನ್ಯ ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಇವರಿಗೆ 6 ವರ್ಷದ ಗಂಡು ಮಗು ಇದೆ. ಶ್ರೀಕಾಂತ್ ಅವರ ತಾಯಿಯನ್ನು 2 ಸಾವಿರ ರು. ಕೇಳಿದಾಗ ಅವರ ತಾಯಿ ಕೊಡುವುದಿಲ್ಲ ಎಂದಾಗ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶ್ರೀಕಾಂತ್ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದರಿಂದ ಪೊಲೀಸರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಸತ್ಯಾಸತ್ಯತೆ ತನಿಖೆ ಮೇಲಷ್ಟೆ ಹೊರಬರಬೇಕಿದೆ.
ಅತ್ಯಾಚಾರ ಯತ್ನ; ಪ್ರಕರಣ ದಾಖಲು
ಚಿಂತಾಮಣಿ: ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಊಲವಾಡಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಊಲವಾಡಿ ಗ್ರಾಮದ ಮಹಿಳೆ ತ್ರಿವೇಣಿ ಎಂಬಾಕೆ ಒಂಟಿಯಾಗಿ ತೋಟದ ಕೆಲಸದಲ್ಲಿ ನಿರತರಾಗಿದ್ದಾಗ ಅದೇ ಗ್ರಾಮದ ಶ್ರೀನಾಥ್ ಎಂಬವನು ಬಲತ್ಕಾರ ಮಾಡಲು ಯತ್ನಿಸಿದ್ದು, ಆಕೆ ಕಿರುಚಾಡಿದ ಪರಿಣಾಮ ನೆರೆಹೊರೆಯರ ಬಂದು ಆರೋಪಿ ತಪ್ಪಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿಕ್ಷಕಿಗೆ ಮಾನಸಿಕ ಹಿಂಸೆ: ದೂರು
ತಾಲೂಕಿನ ನಂದಿಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮ ಎಂಬಾಕೆಯ ಗಂಡ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಮನನೊಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಘಾತದಲ್ಲಿ ವ್ಯಕ್ತಿ ಸಾವು
ರಸ್ತೆ ಬದಿ ಒಂಟಿಯಾಗಿ ಹೋಗುತ್ತಿರುವಾಗ ಬೈಕ್ ಸವಾರ ಅತಿವೇಗ ಮತ್ತು ಅಜಾಗ್ರತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಚಿನ್ನಪ್ಪ(35) ಎಂಬವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯ ಕೋನಪ್ಪಲ್ಲಿ ಬಳಿ ನಡೆದು ಹೋಗುತ್ತಿರುವಾಗ ಉಪ್ಪರಪೇಟೆ ಗ್ರಾಮಕ್ಕೆ ಸೇರಿದ 3 ಜನರು ಬೈಕಿನಲ್ಲಿ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಮೃತರು ವಿಜಯಪುರ ಹೋಬಳಿ ಗಂಡಿಗಾನಹಳ್ಳಿ ಗ್ರಾಮ ನಿವಾಸಿ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement