ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹಾಶಿವರಾತ್ರಿ ಆಚರಣೆ

Rashmi Kasaragodu
Updated On : 1 Mar 2014, 12:59 pm

ಚಿಂತಾಮಣಿ: ನಾಡಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕೈವಾರದ ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿನಿಂದಲೇ ಭಕ್ತಾಧಿಗಳು ದೂರದ ಊರುಗಳಿಂದ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಹಣ್ಣು ಕಾಯಿ ಮಾಡಿಸಿದರು. ಶಿವರಾತ್ರಿ ಪ್ರಯುಕ್ತ ಈಶ್ವರ ಲಿಂಗಕ್ಕೆ ಮಹನ್ಯಾಸ ಪೂರ್ವಕ ರುದ್ರಾಭಿಷೇಕವನ್ನು ಅರ್ಪಿಸಲಾಯಿತು. ಪಾರ್ವತೀ ಅಮ್ಮನವರಿಗೆ ವಿಶೇಷ ಅಭಿಷೇಕ ಲಲಿತಾ ಸಹಸ್ರನಾಮಾರ್ಚನೆಯನ್ನು ಮಾಡಲಾಯಿತು. ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು ಭಕ್ತರು ಈ ದೇವಾಲಯದಲ್ಲಿರುವ ಪುರಾತನ ನಂದಿಯನ್ನು ಪೂಜಿಸಿದರು.
ದೇವಾಲಯಗಳ ನಗರಿಯಾದ ಕೈವಾರದ ಅಮರನಾರಾಯಣಸ್ವಾಮಿ ದೇವಾಲಯ, ಶ್ರೀ ಯೋಗಿನಾರೇಯಣಮಠದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರ ಜನಸಂದಣಿ ಅಧಿಕವಾಗಿತ್ತು. ತಾತಯ್ಯನವರ ಮೂಲ ಬೃಂದಾವನವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಆಂಧ್ರ, ತಮಿಳುನಾಡು ಮತ್ತು ಸುತ್ತಮುತ್ತಲಿನ ಭಕ್ತರು ವಿಶೇಷವಾಗಿ ಯೋಗಿನಾರೇಯಣ ಮಠದಲ್ಲಿ ಜಾಗರಣೆ ಪ್ರಯುಕ್ತ ಆಗಮಿಸಿದ್ದರು. ಬಂದ ಭಕ್ತರಲ್ಲಿ ಶ್ರೀ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement