ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುವಕರು ಸಮಾಜಸೇವೆಯಲ್ಲಿ ತೊಡಗಿ

Rashmi Kasaragodu
Updated On : 1 Mar 2014, 12:59 pm

ಕೆಜಿಎಫ್: ಇಂದಿನ ಯುವಕರು ಸಮಾಜಕ್ಕೆ ನಾವು ಏನು ಮಾಡಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸಮಾಜ ಸೇವೆಯಲಿ ತೊಡಗಿಸಿಕೊಳ್ಳಬೇಕು ಎಂದು ಎನ್‌ಎಸ್‌ಎಸ್ ಶಿಬಿರಾಧಿಕಾರಿ ಹೇಳಿದರು. ಬೇತಮಂಗಲ ಸಮೀಪದ ಗುಟ್ಟಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೊಡ್ಡಕಾರಿ ಗ್ರಾಮದಲ್ಲಿ 7 ದಿನಗಳ ಕಾಲ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕಿ ಶೋಭಾ ಮಾತನಾಡಿ, ಗ್ರಾಮೀಣ ಜನರ ಅಭಿವೃದ್ಧಿಗೆ ಇಂದಿನ ಯುವಕರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಇಲಾಖೆಯ ಡಾ. ಯಾಮಿನಿ, ಗ್ರಾಪಂ ಸದಸ್ಯ ಲಕ್ಷ್ಮೀವೆಂಕಟರಾಮೇಗೌಡ, ಸುಖ್ಯ ಶಿಕ್ಷಕಿ ಗಣೇಶ್, ಮಾಲಿನಿ, ಅರವಿಂದ್‌ರೆಡ್ಡಿ, ಉಪನ್ಯಾಸಕ ನಾಗರಾಜ್, ಪ್ರಾಂಶುಪಾಲ ಎಚ್. ಮುನಿಯಪ್ಪ, ಶಂಕರನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement