ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಶೇಷ ಹರಿಕಥಾ ಕಾರ್ಯಕ್ರಮ

Rashmi Kasaragodu
Updated On : 1 Mar 2014, 1:01 am

ಚಿಂತಾಮಣಿ: ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಶಿವರಾತ್ರಿ ಜಾಗರಣೆ ಪ್ರಯುಕ್ತ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್‌ರಿಂದ ವಿಶೇಷ ಹರಿಕಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪಕ್ಕವಾದ್ಯದಲ್ಲಿ ಎ.ವಿ. ವಿಶ್ವನಾಥ್ ಹಾರ್ಮೋನಿಯಂ, ಎ.ವಿ.ಶ್ರೀಹರಿ ಪಿಟೀಲು, ಕೆ. ರಾಮಕುಮಾರ್ ಮತ್ತು ಪ್ರಶಾಂತ್ ತಬಳ, ಜೆ. ವೆಂಕಟರವಣಪ್ಪ ಮತ್ತು ಷಣ್ಮೂಗಚಾರ್ ಮೃದಂಗ, ಕೆ.ಕೆ. ಭಾನುಪ್ರಕಾಶ್ ಮೋರ್ಚಿಂಗ್ ಮತ್ತು ಖಂಜಿರ ಸಹಕಾರ ನೀಡಿದರು.
ಅಕಾಡೆಮಿಗೆ ಆಯ್ಕೆ: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ವಾನರಾಶಿ ವಾಲಕೃಷ್ಣ ಭಾಗವತರ್‌ರನ್ನು ಸರ್ಕಾರ ನೇಮಿಸಿದೆ. ಬಾಲಕೃಷ್ಣ ಭಾಗವತರ್ ಸಂಗೀತ, ಸಾಹಿತ್ಯ ಮತ್ತು ಹರಿಕಥೆ ವಿಭಾಗಗಳಲ್ಲಿ ಸಿದ್ದಹಸ್ತರು. ಇವರು ಶ್ರೀ ಕ್ಷೇತ್ರ ಕೈವಾರದ ಸಂಕೀರ್ತನಾ ಯೋಜನೆಯ ಸಂಚಾಲಕರಾಗಿದ್ದು, ಸುಮಾರು 15 ವರ್ಷಗಳಿಂದಲೂ ಕ್ಷೇತ್ರದಲ್ಲಿ ನಡೆಯುವ ಗುರುಪೂಜಾ ಸಂಗೀತೋತ್ಸವದ ಕಾರ್ಯಕ್ರಮಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ. ತಿರುಪತಿ ತಿರುಮಲ ದೇವಾಲಯ, ದೆಹಲಿಯ ಕನ್ನಡ ಸಂಘ, ತಿರುವಯ್ಯಾರಿನ ಸಂಗೀತ ಸಭೆಗಳಲ್ಲದೆ ದೇಶದ ನಾನಾ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ. ಕೈವಾರ ಯೋಗಿನಾರೇಯಣ ತಾತಯ್ಯನವರ ಹಲವಾರು ತತ್ವಪದ, ಕೀರ್ತನೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಇವರ ಸಂಗೀತ ಸೇವೆ ಮತ್ತು ಸಾಧನೆಯನ್ನು ಗುರ್ತಿಸಿ ಸರ್ಕಾರ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement