ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳಿ'

Rashmi Kasaragodu
Updated On : 1 Mar 2014, 12:59 pm

ಕೋಲಾರ: ಆರ್ಥಿಕ ಪ್ರಜಾಪ್ರಭುತ್ವದ ತಳಹದಿ ಬಲಗೊಳ್ಳಲು ವೈಜ್ಞಾನಿಕ ಮನೋಭಾವ ಹೆಚ್ಚಳ ಅತ್ಯಗತ್ಯವೆಂದು ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ವಿವಿಯ ಡಾ. ಮೆಹಬೂಬ್ ಪಾಷ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ವಿಜ್ಞಾನ ವೇದಿಕೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗಳ ಆಶ್ರಯದಲ್ಲಿ ಸರ್.ಸಿ.ವಿ. ರಾಮನ್‌ರಿಗೆ ನೋಬಲ್ ಪ್ರಶಸ್ತಿ ಸ್ಮರಣೆಯಡಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಕಲ್ಯಾಣ ರಾಜ್ಯದ ಸ್ಥಾಪನೆಗಾಗಿ ಇಂದು ವೈಜ್ಞಾನಿಕ ಮನೋಭಾವದ ಬೆಳವಣಿಗೆ ಅತ್ಯಗತ್ಯವಾಗಿದೆ ಎಂದ ಅವರು, ಬಡತನ ನಿರ್ಮೂಲನೆಯಲ್ಲಿ ಇದರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಅಭಿಪ್ರಾಯಪಟ್ಟರು. ದೇಶದ ಜನಸಂಖ್ಯೆಗೆ ಅಗತ್ಯವಾದ ಆಹಾರ ಒದಗಿಸುವಲ್ಲಿಯು ವೈಜ್ಞಾನಿಕ ಕೃಷಿ ಪದ್ಧತಿಗಳೇ ಸಾಕಾರವಾಗಿದೆ, ಹಸಿರು ಕ್ರಾಂತಿಯ ಹಿಂದೆಯೂ ವೈಜ್ಞಾನಿಕತೆ ಅಡಗಿದೆ ಎಂದರು. ತುಮಕೂರಿನ ದೀಕ್ಷಾ ಫೌಂಡೇಷನ್‌ನ ಡಾ. ಸರ್ವೋತ್ತಮ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಉಪನ್ಯಾಸ ನೀಡಿ, ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಸಂಬಂಧದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಉಪನ್ಯಾಸಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಬೇಕು, ಜ್ಞಾಪಕ ಶಕ್ತಿ ವೃದ್ಧಿಯ ಕುರಿತು ಹಲವಾರು ನಿದರ್ಶನಗಳೊಂದಿಗೆ ಅರಿವು ಮೂಡಿಸಿ ಎಂದರು.
ವಿಜ್ಞಾನ ವೇದಿಕೆ ಸಂಚಾಲಕ ಜಿ.ಆರ್. ಶ್ರೀಧರ್, ಬಾಲಕರ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಂಗಪ್ಪ, ಸಸ್ಯಶಾಸ್ತ್ರ ಮುಖ್ಯಸ್ಥೆ ಪ್ರೊ.ಪದ್ಮ, ಭೌತಶಾಸ್ತ್ರ ಉಪನ್ಯಾಸಕ ಕೆ.ಎನ್. ಶ್ರೀಧರ್, ರಸಾಯನಶಾಸ್ತ್ರ ವಿಭಾಗದ ಸದಾಶಿವಮೂರ್ತ್ತಿ ಇದ್ದರು. ವಿಜ್ಞಾನ ದಿನಾಚರಣೆ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ನಗರದ ಮಹಿಳಾ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸಿ.ಎಸ್. ಶ್ರೀಲತಾ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಬಂಧದಲ್ಲಿ ಇದೇ ಕಾಲೇಜಿನ ಕೆ.ಆರ್. ಸುಪ್ರಿಯಾ ದ್ವಿತೀಯಾ, ಎಸ್. ಸಹನ ತೃತೀಯ ಸ್ಥಾನ ಪಡೆದುಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಬಾಲಕರ ಕಾಲೇಜಿನ ವಿ. ಪ್ರಶಾಂತ್ ಹಾಗೂ ತೃತೀಯ ಸ್ಥಾನವನ್ನು ಸಂತೋಷ್ ಕುಮಾರ್ ಪಡೆದರೆ, ಚಿತ್ರಕಲೆಯಲ್ಲಿ ಬಾಲಕರ ಕಾಲೇಜಿನ ಎಂ.ಸುನಿಲ್ ಪ್ರಥಮ, ಎಂ. ಪವನ್ ಕುಮಾರ್ ದ್ವಿತೀಯ, ನಗರದ ಆದರ್ಶ ಕಾಲೇಜಿನ ಎಸ್. ಶ್ವೇತಾ  ತೃತೀಯ ಸ್ಥಾನ ಪಡೆದುಕೊಂಡರು. ಪ್ರಾಂಶುಪಾಲ ಮಧುಲತಾ ಮೋಸಸ್ ಅಧ್ಯಕ್ಷತೆ ವಹಿಸಿದ್ದು, ಸಾವಯವ ಕೃಷಿ ಕುರಿತು ಅಶೋಕ್ ಕುಮಾರ್ ವಿಚಾರ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement