ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲುಬಾಯಿ; ರೈತರ ನಿರ್ಲಕ್ಷ್ಯ ಸಲ್ಲ

Mainashree
Updated On : 1 Jan 2014, 11:53 am

ಮುಳುಬಾಗಲು: ದೇಶದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬರುತ್ತಿರುವುದರಿಂದ ಪ್ರತಿ ವರ್ಷ ಹಾಲಿನ ಉತ್ಪಾದನೆ ಕಡಿಮೆಯಾಗಿ ಕೋಟಿ ಕೋಟಿ ನಷ್ಟವುಂಟಾಗುತ್ತಿದೆ ಇದನ್ನು ಹತೋಟಿಗೆ ತರಲು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದರೂ ರೈತರು ನಿರ್ಲಕ್ಷ ವಹಿಸುತ್ತಿರುವುದು ವಿಷಾದನೀಯ ಎಂದು ಪಶುಪಾಲನಾ ತಜ್ಞ ಡಾ.ರಘುರಾಮೇಗೌಡ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಸೊನ್ನವಾಡಿ ಗ್ರಾಮದಲ್ಲಿ ಬುಧವಾರ ಕೃಷಿ ಹಾಗೂ ಪಶುಪಾಲನೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಆತ್ಮ ಯೋಜನೆಯಡಿ ಜಾನುವಾರು ಸಾಗಣೆ ಬಗ್ಗೆ ತಾಂತ್ರಿಕ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜೋರು ಜಾನುವಾರು ಸಾವು: ಈ ವರ್ಷದಲ್ಲಿ ಕಾಲುಬಾಯಿ ಜ್ವರ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ  ಕಳೆದ ನಾಲ್ಕು ತಿಂಗಳಿಂದ ಹರಡಿದೆ. ಕೋಲಾರ ಜಿಲ್ಲೆಯಲ್ಲಿ ಆತಿ ಹೆಚ್ಚು ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವಿಗೀಡಾಗಿದೆ. ಆಗಷ್ಟು ತಿಂಗಳಿಂದ ಡಿಸೆಂಬರ್ 25 ರವರೆವಿಗೂ 2407 ಜಾನುವಾರುಗಳು ಸಾವಿಗೀಡಾಗಿದ್ದು  20 ಸಾವಿರ ರಾಸುಗಳು ಈ ರೋಗದಿಂದ ನರಳುತ್ತಿದೆ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣೆಸಿ ಲಸಿಕೆಗಳನ್ನು ಹಾಕಿದೆ.
ಈ ನಿಟ್ಟಿನಲ್ಲಿ ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕೆ ಬದಲು ರೋಗ ಬಾರದಂತೆ ತಡೆಗಟ್ಟುವುದು ಸೂಕ್ತ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರತಿ ವರ್ಷ ಪೆಭ್ರವರಿ ಹಾಗೂ ಆಗಷ್ಟು ತಿಂಗಳಲ್ಲಿ ಕಾಲುಬಾಯಿ ಲಸಿಕೆಗಳನ್ನು ಪ್ರತಿ ಗ್ರಾಮದಲ್ಲೂ ಶಿಬಿರ ನಡೆಸಿ ನೀಡಲಾಗುತ್ತಿದೆ ಎಂದರು.ರಾಸುಗಳ ಮಾಲೀಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಅದರೂ ರೈತರು ನಿರ್ಲಕ್ಷತೆಯಿಂದ ಕಾಲುಬಾಯಿ ಜ್ವರ ಹರಡಲು ಕಾರಣವಾಗುತ್ತಿದೆ ಎಂದರು.
ನಮ್ಮ ದೇಶದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹರಡಿರುವ ಕಾರಣ ಉತ್ಪಾದನೆಯಾಗುವ ಹಾಲನ್ನು ಬೇರೆ ದೇಶದವರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದರು. ಬೇರೆ ದೇಶಗಳವರು ಸಂದೇಶ ಕಳುಹಿಸಿ ಕಾಲುಬಾಯಿ ರೋಗದಿಂದ ಮುಕ್ತವಾದಲ್ಲಿ ಮಾತ್ರ ನಮ್ಮ ದೇಶದ ಹಾಲು ಖರೀದಿಸುವುದಾಗಿ ತಿಳಿಸಿದ್ದಾರೆಂದರು.
ಪಶುಪಾಲನೆ ಇಲಾಖೆಯ ಡಾ.ರಮಾನಂದ್, ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಸಿ.ರಘುಪತಿ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement