ಬ್ಯಾಟರಾಯಸ್ವಾಮಿ ಜಾತ್ರೆ
ಬಂಗಾರಪೇಟೆ: ತಾಲೂಕಿನ ಇತಿಹಾಸ ಪ್ರಸಿದ್ದ ಬ್ಯಾಟರಾಯಸ್ವಾಮಿ ಜಾತ್ರೆ ಮಹೋತ್ಸವದ ಅಂಗವಾಗಿ ಬುಧವಾರ ಸಹಸ್ರಾರು ಭಕ್ತಾಧಿಗಳ ನಡುವೆ ಭಹ್ಮರಥೋತ್ಸವಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಚಾಲನೆ ನೀಡಿದರು. ಬ್ಯಾಟರಾಯಸ್ವಾಮಿ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ, ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರ ಭಾರೀ ದನಗಳು ಸೇರುವುದು.
ಮಾತ್ರವಲ್ಲ, ಪ್ರತಿ ವರ್ಷ ದಾಖಲೆ ಮಟ್ಟಕ್ಕೆ ಇಲ್ಲಿ ದನಗಳು ಮಾರಾಟವಾಗುತ್ತವೆ. ಪ್ರತಿ ವರ್ಷದಂತೆ ಸಹಸ್ರಾರು ಭಕ್ತರಿಗೆ 'ಕನ್ನಡಪ್ರಭ' ಏಜೆಂಟರಾದ ಜಾನಕಿರಾಮ್ ಈ ವರ್ಷವೂ ಅನ್ನದಾನ ಮಾಡಿದರು.