ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾನವೀಯತೆ ಸಾರುವುದೇ ಸಾಹಿತ್ಯ ಉದ್ದೇಶ

Mainashree
Updated On : 1 Jan 2014, 11:55 am

ಚಿಕ್ಕಬಳ್ಳಾಪುರ: ಸಾಹಿತ್ಯದ ಪ್ರಮುಖ ಉದ್ದೇಶವೇ ಮಾನವತ್ವವನ್ನು ಎಲ್ಲೆಡೆ ಪಸರಿಸುವಂತೆ ಮಾಡಿ ಜನರನ್ನು ಜಾಗೃತರನ್ನಾಗಿಸುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಲ್. ಹನುಮಂತರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿರುವ  ಈಶ್ವರನ ದೇವಾಲಯದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಡೆದ ಕುವೆಂಪುರವರ 109ನೇ ಜನ್ಮದಿನಾಚರಣೆ ಮತ್ತು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕುವೆಂಪುರವರ ಸಾಹಿತ್ಯವೇ ವಿಶೇಷವಾದುದು. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವಂತಹುದು, ಯುವಕರಿಗೆ ಪರಿಚಯಿಸುವಂತಹುದು ಅಗತ್ಯವಿದೆ ಎಂದರು.
ಸಾಹಿತಿ ಇಂದುಮತಿ ಮಾತನಾಡಿ, ಕನ್ನಡದ ಮೇರು ಕೃತಿ ರಾಮಾಯಣ ದರ್ಶನಂ. ಈ ಕೃತಿಯಲ್ಲಿ ಕುವೆಂಪುರವರು ಮಾಡಿರುವ ವರ್ಣನೆಯು ಬಹು ಸೊಗಸಾದುದು. ಕುವೆಂಪುರವರಿಗೆ ಕುವೆಂಪುರವರೇ ಸಾಟಿ ಎಂದರು.
ರಾಮನ ಗುಣಗಳು ಈಗ ಅಗತ್ಯ, ರಾಜಕಾರಣಿಗಳು ಕಡೇ ಪಕ್ಷ ರಾಮನಂತೆ ಆಡಳಿತ ನಡೆಸಿದರೆ ಜನ ಸುಖವಾಗಿರುತ್ತಾರೆ ಎಂದ ಅವರು, ಎಲ್ಲಾ ಗ್ರಂಥಗಳಲ್ಲಿ ಮಾನವತ್ವದ ಬೆಳಕಿದೆ.ಸಹೋದರ ಭಾವನೆ, ಐಕ್ಯತೆಗಳ ಕೊರತೆಯು ರಾಮಾಯಣ ದರ್ಶನಂ ಓದಿದಾಗ ಬದಲಾಗಿ ಮಾನವತ್ವ ಬೆಳೆಯುತ್ತದೆ ಎಂದರು.
ಹಿರಿಯ ಪತ್ರಕರ್ತ ಎಸ್. ಶಿವರಾಂ ಮಾತನಾಡಿ, ಯುವ ಕವಿಗಳು ಪಕ್ವತೆ ಬೆಳೆಸಿಕೊಳ್ಳಲು ಅನೇಕ ಮಹಾನ್ ಸಾಹಿತಿಗಳು ರಚಿಸಿರುವಂತಹ ಸಾಹಿತ್ಯದ ಅಧ್ಯಯನ ಮಾಡಬೇಕೆಂದರು.
ಇತ್ತೀಚೆಗೆ ಮೃತರಾದ ಸಾಹಿತಿ ಜಿ. ಎಸ್. ಶಿವರುದ್ರಪ್ಪನವರ ನಿಧನಕ್ಕೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ಎಸ್. ಶಿವರಾಂ, ಪೊಲೀಸ್ ಪೇದೆ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.
ಪ್ರೇಮಲೀಲಾ, ಲತಾ ಮೋಹನ್, ಸೌಭಾಗ್ಯ ಆನಂದ್, ಸರಸ್ವತಮ್ಮ, ಅನಿಲ್, ವರದರಾಜು, ಇಂದುಮತಿ, ವೆಂಕಟರಾಜು, ನಾಗಭೂಷಣರೆಡ್ಡಿ, ವಿಶ್ವನಾಥ್, ಹಾಲಪ್ಪ ಮುಂತಾದವರು ಕವನಗಳನ್ನು ವಾಚಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ. ಚಲಪತಿಗೌಡ, ತಾಲೂಕು ಗೌರವಾಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಅಧ್ಯಕ್ಷ ಗೋವಿಂದರಾಜು, ಕಾರ್ಯಕರ್ತರಾದ ರಮೇಶ್, ಪ್ರಕಾಶ್, ಸರಸ್ವತಮ್ಮ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವಮೋಹನ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement