'ಯಾರೂ ಉಚಿತ ನಿವೇಶನ ನೀಡಿಲ್ಲ'
ಶಿಡ್ಲಘಟ್ಟ: ಚಿಕ್ಕಬಳ್ಳಾಪುರದ ಸಮೀಪ ಬಾಲಕಿಯರ ವಸತಿ ನಿಲಯ ಹಾಗೂ ಕಾಲೇಜು ಸ್ಥಾಪನೆಗೆ ಯಾರೂ ಉಚಿತವಾಗಿ ನಿವೇಶನ ನೀಡಿಲ್ಲವೆಂದು ಬೆಂಗಳೂರು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ನಂಜುಂಡಗೌಡ ಸ್ಪಷ್ಟ ಪಡಿಸಿದ್ದಾರೆ.
ವಸತಿ ನಿಲಯ ಹಾಗೂ ಕಾಲೇಜು ಸ್ಥಾಪನೆಗಾಗಿ ರು. 75 ಲಕ್ಷ ನೀಡಿ ನಿವೇಶನ ಖರೀದಿಸಲಾಗಿದೆ ಈ ಸಂಬಂಧ ಯಾವುದೇ ಗೊಂದಲ ಸಲ್ಲ ಎಂದು ಅವರು ಒಕ್ಕಲಿಗ ಸಮಾಜಕ್ಕೆ ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನ ಮೇಲೂರು ಸಮೀಪ ಒಕ್ಕಲಿಗರ ಸಮುದಾಯದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃಧ್ಧಿಗಾಗಿ ಪ್ರಾಮಾಣಿವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ನಿರ್ದೇಶಕ ಸ್ಥಾನದ ಅಭ್ಯರ್ಥಿ ಡಾ.ಎಂ.ಸಿ.ನವೀನ್ ಕುಮಾರ್ ಮಾತನಾಡಿದರು.
ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಮುನಿಕೃಷ್ಣಪ್ಪ, ಹಾಪ್ ಕಾಮ್ಸ್ ಉಪಾಧ್ಯಕ್ಷ ಮುತ್ತೂರು ಚಂದ್ರೇಗೌಡ, ಜಿಪಂ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತೋಪಡ ರಾಮಚಂದ್ರಪ್ಪ ಮತ್ತಿತರರು ಇದ್ದರು.