ಕೋಟಿಲಿಂಗೇಶ್ವರ ರಥೋತ್ಸವ
ಕೆಜಿಎಫ್: ಹೊಸ ವರ್ಷದ ಪ್ರಯುಕ್ತ ಸಮೀಪದ ಕಮ್ಮಸಂದ್ರ ಗ್ರಾಮದ ಕೋಟಿಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಕೋಟಿಲಿಂಗೇಶ್ವರ ಸ್ವಾಮಿಯ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕೆಜಿಎಫ್ ಸೇರಿಂದಂತೆ ರಾಜ್ಯ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಲಕ್ಷಾಂತರ ಭಕ್ತಾಧಿಗಳು ಕೋಟಿಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಲ್ಪಿಸಲಾಗಿತ್ತು. ಕೋಟಿಲಿಂಗ ದೇವಸ್ಥಾನದ ಸಂಸ್ಥಾಪಕ ಸಾಂಬಶಿವಮೂರ್ತಿ ಸ್ವಾಮಿಜಿ ಅವರಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.