ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲಾ ಜಮೀನು ಒತ್ತುವರಿ, ಶಾಲೆಗೆ ಬಾರದ ಮಕ್ಕಳು

Mainashree
Updated On : 2 Jan 2014, 11:02 am

ಮುಳಬಾಗಲು: ತಾಲೂಕಿನ ಮೂಡಿಯನೂರು ಸರ್ಕಾರಿ ಶಾಲೆಯ ಜಮೀನು ಒತ್ತವರಿ ತೆರವು ಗೊಳಿಸದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ತೀರ್ಮಾನಿಸಿದ್ದಾರೆ.
ಶಾಲೆ ತೆಗೆಯಲಾಗಿತ್ತು. ಸರ್ಕಾರಿ ಶಾಲೆಗೆ ಸೇರಿದ ಜಮೀನು ಒತ್ತುವರಿ ತೆರವು ಮಾಡಲು ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದ್ದು, ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಶಾಲೆ ವ್ಯಾಪ್ತಿಯ 18.5 ಎಕರೆ ಜಮೀನಿನಲ್ಲಿ 14.25 ಎಕರೆ ಒತ್ತುವರಿಯಾಗಿದೆ. ಕಳೆದ ಮೂರು ತಿಂಗಳಿಂದ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಒತ್ತುವರಿ ತೆರವಿಗಾಗಿ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ವಿವಾದ ಬಗೆಹರಿದು ಶಾಲೆಗೆ ಜಮೀನು ಹಸ್ತಾಂತರ ಮಾಡುವವರೆವಿಗೂ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿರುವುದಾಗಿ ಪೋಷಕರು ಕನ್ನಡ ಪ್ರಭಕ್ಕೆ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್, ಶಾಲೆಗೆ ಬೀಗ ಹಾಕುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ತಾಲೂಕು ಆಡಳಿತ ಮನಿವಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಮನವೊಲಿಕೆ ಪ್ರಯತ್ನ ಫಲಪ್ರದವಾಗಲಿಲ್ಲ. ಸದರಿ ಜಮೀನಿಗೆ ಸೂಕ್ತವಾದ ದಾಖಲೆಗಳಿದ್ದು, ಒತ್ತುವರಿ ತೆರವಿಗೆ  ಗ್ರಾಮಸ್ಥರು ಒತ್ತಾಯಿಸಿದರು. ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳದ ಪಕ್ಷದಲ್ಲಿ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದಾಗಿ ಪಾಲಕರು ಹೇಳಿದರು. ಮುಳಬಾಗಲು ಎಸ್‌ಐ ಮೇಲ್ವಿನ್ ಪ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿದ್ದರು. ಶಾಲಾ ಸಮಿತಿ ಅಧ್ಯಕ್ಷ ವಿ. ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಶಂಕರಾಚಾರಿ, ಶಾಂತಮ್ಮ, ವೆಂಕಟರವಣಪ್ಪ, ಅಲೇರಿ ವೆಂಕಟೇಶಪ್ಪ, ಎನ್. ರಾಮಕೃಷ್ಣಪ್ಪ, ಆರ್. ಕೃಷ್ಣಪ್ಪ,  ಎಂ.ವಿ. ಮಂಜುನಾಥ್, ಪಲ್ಲಿ ಸೀನಪ್ಪ, ವಿ. ಮಂಜುನಾಥ್,  ಶ್ರೀನಿವಾಸ್, ಎಂ. ರಾಮಕೃಷ್ಣಪ್ಪ, ಎಂ. ನಾರಾಯಣಸ್ವಾಮಿ,  ಚೌಡಪ್ಪ, ವಿ. ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement