ಸುದ್ದಿ ಸಂಕ್ಷೇಪ
ಅಂಗವಿಕಲರ ಬಸ್ ಪಾಸ್ ಅವಧಿ ವಿಸ್ತರಣೆ
ಗೌರಿಬಿದನೂರು: ರಾಜ್ಯ ಸಾರಿಗೆ ಸಂಸ್ಥೆಯ ಅಂಗವಿಕಲರ ರಿಯಾಯಿತಿ ಬಸ್ ಪಾಸ್ ಅವಧಿಯನ್ನು 2004 ಫೆಬ್ರವರಿ14ರವರಿಗೂ ವಿಸ್ತರಿಸಲಾಗಿದ್ದು, ಅಂಗವಿಕಲರು ಬಸ್ಪಾಸ್ ನವೀಕರಿಸಿಕೊಳ್ಳಬೇಕೆಂದು ಕೃಷ್ಣಪ್ಪ ಹಾಗೂ ಲೇಪಾಕ್ಷಿ ಸಂತೋಷರಾವ್ ತಿಳಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಚಿನ್ನಹಳ್ಳಿ ಗ್ರಾಮದ ಬತ್ಯಪ್ಪ ಎಂಬವರ ಮಗಳಾದ ಭಾಗ್ಯ(32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಮೆಲ್ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಘ್ರವೇ ಫ್ಲೋರೈಡ್ ಮುಕ್ತ ನೀರಿನ ಘಟಕ
ಚಿಂತಾಮಣಿ: ಪ್ಲೋರೈಡ್ ಮುಕ್ತ ನೀರನ್ನು ಗ್ರಾಮೀಣ ಜನರಿಗೆ ಒದಗಿಸಲು ಪ್ಲೋರೈಡ್ ಮುಕ್ತ ನೀರಿನ ಘಟಕವನ್ನು ಶೀಘ್ರವೇ ಪ್ರಾರಂಭಿಸಲಾಗುವುದೆಂದು ಕೆಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಿ.ಆರ್. ಶಿವಕುಮಾರಗೌಡ ಹೇಳಿದರು. ತಾಲೂಕಿನ ಚಿಲಕಲನೇರ್ಪು ಹೋಬಳಿ ಏನಿಗದಲೆ ಗ್ರಾಮದಲ್ಲಿ ಕೆಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ಹಳ್ಳಿಗಳಲ್ಲಿ ಪ್ಲೋರೈಡ್ ನೀರಿನ ಅಂಶ ಹೆಚ್ಚಾಗಿದ್ದು, ಇದರಿಂದ ಜನರಿಗೆ ಮೂಳೆ, ಕಣ್ಣು, ಹಲ್ಲು ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು, ಇದನ್ನು ತಪ್ಪಿಸಲು ಪ್ಲೋರೈಡ್ ಮುಕ್ತ ನೀರಿನ ಘಟಕಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೆಜೆಪಿಯ ದಯಾನಂದ್, ಆಂಜಪ್ಪ, ಚಲಪತಿ, ವೆಂಕಟರವಣ, ಬಂಗಾರುಬಾಬು ಇದ್ದರು.