ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 2 Jan 2014, 11:03 am

ಜಿಪಂ ಸಾಮಾನ್ಯ ಸ್ಥಾಯಿ ಸಮಿತಿ ಸಭೆ
ಕೋಲಾರ: ಇಲ್ಲಿನ ಜಿಪಂ ಸಭಾಂಗಣದಲ್ಲಿ ಜ.8 ರಂದು ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಸ್ಥಾಯಿ ಸಮಿತಿಯ ಸಭೆಯನ್ನು ನಿಗದಿಪಡಿಸಲಾಗಿದೆ. ಜಿಪಂ ಉಪಾಧ್ಯಕ್ಷೆ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಲುವೇಲಮ್ಮ ಎನ್. ರಾಜಗೋಪಾಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾಕ್ಟರೇಟ್
ಕೋಲಾರ: ಬೆಂಗಳೂರು ವಿ.ವಿ.ಪುರ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಸಹ ಪ್ರಾಧ್ಯಾಪಕ ಎಸ್.ಆರ್. ಆನಂದಗೌಡ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿ.ಎಚ್‌ಡಿ ಪ್ರದಾನ ಮಾಡಿದೆ. ಇವರಿಗೆ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಕೆ. ಸೋಮಶೇಖರ್ ಮಾರ್ಗದರ್ಶಕರಾಗಿದ್ದರು.
ಅನುಚಿತ ವರ್ತನೆ
ಚಿಂತಾಮಣಿ: ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಇರಗಂಪಲ್ಲಿ ಗ್ರಾಮದಲ್ಲಿರುವ ಕೆನರಾಬ್ಯಾಂಕ್‌ನಲ್ಲಿ ವೆಂಕಟೇಶ್ ಎಂಬಾತ ಬ್ಯಾಂಕಿನ ವ್ಯವಸ್ಥಾಪಕ ಕೋಟೇಶ್ವರರಾವ್ ಹಾಗೂ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅಡ್ಡಿ ಪಡಿಸಿದ ಎಂದು ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಕೋಲಾರ: ಕೋಲಾರ ತಾಲೂಕು ತ್ರಿಚಕ್ರ ವಾಹನ ಚಾಲಕರ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದ್ದಾರೆ.  ಪ್ರಧಾನ ಕಾರ್ಯದರ್ಶಿ ಸೈಯದ್ ಜಭೀವುಲ್ಲಾ, ಕಾರ್ಯದರ್ಶಿ ಜೆ. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಚಂದ್ರನ್, ಜಂಟಿ ಕಾರ್ಯದರ್ಶಿ ನಂದೀಶ್, ಸಹ ಕಾರ್ಯದರ್ಶಿ ಎಂ.ಮಂಜುನಾಥ್, ಪತ್ರಿಕಾ ಕಾರ್ಯದರ್ಶಿ ಮುಷ್ಟಾಕ್, ಖಜಾಂಚಿ ಅಲೆಕ್ಸಾಂಡರ್, ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ಕೆ. ಶ್ರೀನಿವಾಸ್, ವಿ. ಮಂಜುನಾಥ್, ಕೆ.ಬಿ.ಟಿ. ಮಂಜುನಾಥ್,  ಕೃಷ್ಣ, ಆರ್. ನಾಗರಾಜ್, ಸಮೀವುಲ್ಲಾ, ಆದಮ್ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕೆ.ವಿ. ಸುರೇಶ್‌ಕುಮಾರ್, ವಿ ಮಂಜುನಾಥ್, ಕೆ. ರಾಮೇಗೌಡ, ಎನ್. ಅಮ್ಜದ್‌ಪಾಷ, ಹೆಚ್.ಪಿ. ಶ್ರೀಧರ್, ಬಿ. ರಾಜಣ್ಣ, ಪಿ. ಮಂಜುನಾಥ್, ಶಿಳ್ಳಂಗೆರೆ ನಾರಾಯಣಯ್ಯರ್, ಕೆ. ವೇಣುಗೋಪಾಲ್, ದಸ್ತಗೀರ್, ಕೆ.ಎಂ. ವೆಂಕಟಾಚಲಪತಿ, ಕೆ.ಎಸ್. ಕೃಷ್ಣಂರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ನಾಳೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ
ಚಿಂತಾಮಣಿ: ರಾಜ್ಯದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಸಿರಿಗನ್ನಡ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜ.4ರಂದು ಮಧ್ಯಾಹ್ನ 1 ಗಂಟೆಗೆ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆಯೆಂದು ವೇದಿಕೆಯ ಕಾರ್ಯದರ್ಶಿ ಎಸ್.ಸಿ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ವಸಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷರಾದ ಕೆ.ಎನ್.ಅಕ್ರಂ ಪಾಷಾ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳ ಸ್ವರಚಿತ ಕವನಗಳನ್ನು ಒಳಗೊಂಡ ಕಾವ್ಯ ಸಿರಿ ಕವನ ಸಂಕಲನವನ್ನು ಹೊರ ತರಲಾಗುತ್ತಿದೆ. ಈ ಕೃತಿಯನ್ನು ಹಿರಿಯ ಸಾಹಿತಿಗಳಾದ ಕೋಟಗಲ್ ನಾಗಸುಬ್ರಮಣ್ಯಂ ಲೋಕಾರ್ಪಣೆಗೊಳಿಸುವರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ತಾಲೂಕು ಚುಸಾಪ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ಹಾಗೂ ಹವ್ಯಾಸಿ ಪತ್ರಿಕಾ ಸಂಗ್ರಹಕಾರ ಮತ್ತು ಪ್ರದರ್ಶಕ ಕಲ್ಯಾಣ್‌ಕುಮಾರ್‌ರನ್ನು ಸನ್ಮಾನಿಸಲಾಗುವುದು.
ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಲಾ ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಹುನಗುಂದ್ ಇಂದು ಗುಡಿಬಂಡೆಗೆ
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ್ ಜ.4 ರಂದು ಗುಡಿಬಂಡೆ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.4 ರಂದು ಬೆಳಗ್ಗೆ 10 ಗಂಟೆಗೆ ಗುಡಿಬಂಡೆಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ನಂತರ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಉನ್ನತ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಆಯೋಜಿಸಿರುವ ಮಾನವ ಹಕ್ಕುಗಳ ಜಾಗೃತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಗುಡಿಬಂಡೆಯ ಪ್ರವಾಸ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಗುಡಿಬಂಡೆಯ ತಾಲೂಕು ಕಚೇರಿಗೆ ಭೇಟಿ, ನಂತರ ಸಂಜೆ 4 ಗಂಟೆಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ.
ಇಂದು ಅವಿಶ್ವಾಸ ನಿರ್ಣಯ ಸಭೆ
ಟೇಕಲ್: ಮಾಲೂರು ತಾಲೂಕಿನಲ್ಲಿ ಕುತೂಹಲ ಮೂಡಿಸಿರುವ ಕೊಂಡಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ನಿರ್ಣಯ ಸಭೆ ಜ.3ರ ಬೆಳಿಗ್ಗೆ 11 ಗಂಟೆಗೆ ಗ್ರಾಪಂ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ಗ್ರಾಪಂ ಕಾರ್ಯಾಲಯ ತಿಳಿಸಿದೆ. ಒಟ್ಟು 16 ಗ್ರಾಪಂ ಸದಸ್ಯರಿರುವ ಮಹಿಳಾ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಮಸೂದ ಪರ್ವಿನ್ ಅಧ್ಯಕ್ಷರಾಗಿದ್ದು ಡಿ.13 ರಂದು 12 ಗ್ರಾಪಂ ಸದಸ್ಯರು ಉಪವಿಭಾಗಾಧಿಕಾರಿಗೆ ಅವಿಶ್ವಾಸ ನಿರ್ಣಯದ ಪತ್ರ ರವಾನಿಸಿರುವ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ತ್ರೀಶಕ್ತಿ ಪುರಸ್ಕಾರಕ್ಕೆ ಅರ್ಜಿ
ಕೋಲಾರ: ಸ್ತ್ರೀಶಕ್ತಿ ಪುರಸ್ಕಾರಗಳಾದ ದೇವಿ ಅಹಲ್ಯಾಬಾಯಿ ಹೋಲ್ಕರ್, ಕನ್ನಗಿ, ಮಾತಾ ಜೀಜಾಬಾಯಿ, ರಾಣಿ ಲಕ್ಷ್ಮಿಬಾಯಿ, ರಾಣಿ ರುದ್ರಮ್ಮದೇವಿ ಹೆಸರಿನಲ್ಲಿ ನೀಡಲ್ಪಡುವ ಪ್ರಶಸ್ತಿಗಾಗಿ ಅರ್ಹ ಸ್ತ್ರೀಶಕ್ತಿ ಸಂಘಟನೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜ.7 ರೊಳಗಾಗಿ ಸಲ್ಲಿಸಬೇಕಾಗಿದೆ. ಅರ್ಜಿ ನಮೂನೆ ಹಾಗೂ ಮಾರ್ಗಸೂಚಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೊದಲನೇ ಮಹಡಿ, ಕುವೆಂಪು ನಗರ, ಕೋಲಾರ ರವರ ಕಚೇರಿಯಲ್ಲಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement