ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೀತದಾಳುಗಳ ಬಲಗೈ ಕಟ್ ಖಂಡಿಸಿ ಪ್ರತಿಭಟನೆ

Mainashree
Updated On : 3 Jan 2014, 10:59 am

ಬಾಗೇಪಲ್ಲಿ: ಇತ್ತೀಚೆಗೆ ಒಡಿಶಾದಲ್ಲಿ ಇಬ್ಬರ ಜೀತದಾಳುಗಳ ಬಲಗೈ ಕತ್ತರಿಸಿದ ಘೋರ ಘಟನೆ ಖಂಡಿಸಿ ಪಟ್ಟಣದಲ್ಲಿ ಜೀತ ವಿಮುಕ್ತಿ ಕರ್ನಾಟಕ ಮತ್ತು ಜೀತದಾಳು ಕೃಷಿ ಕಾರ್ಮಿಕರ ಒಕ್ಕೂಟಗಳ ಕಾರ್ಯಕರ್ತರು ಪ್ರತಿಭಟಿಸಿದರು.
ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶದ  ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಜೀತ ಪದ್ಧತಿ ವ್ಯಾಪಕವಾಗಿದ್ದು, ಅಮಾನವೀಯ ಕೌರ್ಯವು ಬೆಳಕಿಗೆ ಬರುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಅನಿಷ್ಠ ಪದ್ಧತಿಗಳಲ್ಲಿ ಒಂದಾಗಿರುವಂತಹ ಜೀತ ಪದ್ಧತಿಯನ್ನು ತೊಲಗಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲವೆಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಲ್ಲು ಕ್ವಾರಿಯೊಂದರಲ್ಲಿ ಐದು ಜನ ಜೀತದಾಳುಗಳಿಂದ ಕೆಲಸ ಮಾಡಿಸುತ್ತಿದ್ದ ಪ್ರಕರಣ 2000 ರಲ್ಲಿ ಬೆಳಕಿಗೆ ಬಂತು.1993ರಲ್ಲಿ ಆನೇಕಲ್ ತಾಲೂಕಿನಲ್ಲಿ 12 ವರ್ಷದ ಬಾಲಕ ಜೀತದಾಳುವಿನ ಎರಡು ಕೈಬೆರಳುಗಳನ್ನು ಕತ್ತರಿಸಲಾಗಿತ್ತು. ಅದೇ ತಾಲೂಕಿನಲ್ಲಿ ಗೌಡನ ಮಗಳ ಪ್ರೀತಿ ಬಲೆಗೆ ಬಿದ್ದಿದ್ದ ಬಾಲಕನಿಗೆ, ಹುಡುಗಿಯ ತಂದೆ ವಿಷ ಕುಡಿಸಿ ಸಾಯಿಸಿದ ಪ್ರಕರಣ, 1999 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಾಲ ಜೀತದಾಳುವಿನ ಎರಡೂ ಕೈ ಬೆರಳುಗಳ ಉಗುರುಗಳಿಗೆ ಸೂಜಿಯಿಂದ ತಿವಿದು ಹಿಂಸಿಸಿದ್ದು, 2003 ರಲ್ಲಿ ಹೆಚ್.ಡಿ. ಕೋಟೆಯಲ್ಲಿ ಜೀತದಾಳುವಿನ ಕೆನ್ನೆಗೆ ಬಲವಾಗಿ ಹೊಡೆದು ಸಾಯಿಸಿದ್ದು ಇಂತಹ ಸಾಕಷ್ಷು ಪ್ರಕರಣಗಳು ಬೆಳಕಿಗೆ ಬಂದಿದ್ದು ಜೀತ ಪದ್ಧತಿ ತಾಂಡವವಾಡುತ್ತಿದೆ ಎಂದರು.
ತಾಲೂಕು ಮಹಿಳಾ ಸಂಚಾಲಕಿ ಸೋಮಾವತಿ, ಜೀವಿಕ ಮುಖಂಡರಾದ ಹೊಸಹುಡ್ಯ ನಾರಾಯಣಸ್ವಾಮಿ,ಅಂಜಿನಪ್ಪ, ಚೌಡಪ್ಪ, ಬಾಬು ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement