ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ

Mainashree
Updated On : 3 Jan 2014, 11:00 am

ಕೆಜಿಎಫ್: ಗಂಡ ಮತ್ತು ಆತನ ಕುಟುಂಬಸ್ಥರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಹೋಬಳಿಯ ನೀಲಕಂಠಪುರ ಗ್ರಾಮ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ನೀಲಮ್ಮ(35) ಮೃತಮಹಿಳೆ.
ಈಕೆ ವೆಂಕಟೇಶ್ನೊಂದಿಗೆ 14 ವರ್ಷಗಳಿಂದ ದಾಂಪತ್ಯ ನಡೆಸುತ್ತಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ಗಂಡ ವೆಂಕಟೇಶ್ ಮತ್ತು ಆತನ ಕುಟುಂಬಸ್ಥರು ನೀಲಮ್ಮಗೆ ತವರು ಮನೆಯಿಂದ ವರದಕ್ಷಿಣೆಯನ್ನು ತರುವಂತೆ ಆಗಾಗ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement