ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ತಕರಿಗೆ ಪರವಾನಗಿ ಪಡೆಯಲು ಸೂಚನೆ

Mainashree
Updated On : 3 Jan 2014, 11:00 am

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಯಾವುದೇ ಪರವಾನಗಿಯಿಲ್ಲದೇ ಸಾರ್ವಜನಿಕರಿಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ವಿರುದ್ಧ ದಂಡದ ಜೊತೆಗೆ ಶಿಕ್ಷೆ ವಿಧಿಸಲಿದ್ದು ತ್ವರಿತವಾಗಿ ಆಹಾರ ಪದಾರ್ಥಗಳ ವ್ಯಾಪಾರಸ್ಥರು ಫೆ.4 ರೊಳಗೆ ನೋಂದಣಿ ಪರವಾನಗಿಯನ್ನು ಪಡೆದುಕೊಳ್ಳಬೇಕೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಅಂಕಿತಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.  
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅನ್ವಯ ಆಹಾರ ಪದಾರ್ಥಗಳ ವ್ಯಾಪಾರಸ್ಥರಾದ ಅಂಗಡಿಗಳು, ಹೊಟೇಲ್ಗಳು, ಡಾಬಾ, ರೆಸ್ಟೋರೆಂಟ್ಗಳು, ಹಾಲು ಮಾರಾಟಗಾರರು, ಕ್ಯಾಂಟಿನ್, ಟೀ ಸ್ಟಾಲ್ಗಳು, ಮೆಸ್ಗಳು, ಮಾಂಸ, ಮೀನು, ಕೋಳಿ, ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು, ಸ್ವೀಟ್ ಸ್ಟಾಲ್ಗಳು, ಪ್ಯಾಕೇಜ್ ಡ್ರಿಕಿಂಗ್ ವಾಟರ್ ಘಟಕಗಳ ಸೇರಿದಂತೆ ಇತರೆ ಆಹಾರ ಪದಾರ್ಥಗಳ ವ್ಯಾಪಾರಸ್ಥರು ಪರವಾನಗಿಯನ್ನು ಪಡೆದುಕೊಂಡ ನಂತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕಾಗಿದೆ. ಒಂದು ವೇಳೆ ಪರವಾನಗಿಯಿಲ್ಲದೇ ಅನಧಿಕೃತವಾಗಿ ವ್ಯಾಪಾರ ವಹಿವಾಟವನ್ನು ನಡೆಸುತ್ತಿರುವುದು ದೃಢಪಟ್ಟರೆ 5 ಲಕ್ಷ ರು. ದಂಡ ಮತ್ತು 6 ತಿಂಗಳ ಕಾರಾಗಣಹ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವ್ಯಾಪಾರಸ್ಥರು ಅರ್ಜಿಗಳನ್ನು ಅಂಕಿತಾಧಿಕಾರಿಗಳು ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಾರ್ಯಾಲಯ, ಹೊಸ ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ವಿಳಾಸದಲ್ಲಿ ಪಡೆದುಕೊಂಡು ಭರ್ತಿ ಮಾಡಿ ಫೆ.4 ರೊಳಗೆ ಸಲ್ಲಿಸಬೇಕೆಂದು ಅಂಕಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಂಕಿತಾಧಿಕಾರಿಗಳ ಮೊ.ಸಂ. 8105203715 ಮತ್ತು ಹಿರಿಯ ಆಹಾರ ಸುರಕ್ಷತಾಧಿಕಾರಿಗಳ ಮೊ.ಸಂ  9141117197 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement