ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 3 Jan 2014, 11:00 am

ಜಹೀರಾ ಬಾನು ಗ್ರಾಪಂ ಅಧ್ಯಕ್ಷೆ
ಚಿಂತಾಮಣಿ: ಗ್ರಾಮಗಳ ಮೂಲ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜನರಿಗೆ ಉತ್ತಮ ಸೇವೆ ಮಾಡುತ್ತೇನೆಂದು ಕೋಟಗಲ್ ಗ್ರಾಪಂ ಅಧ್ಯಕ್ಷೆ ಅಂಜುಮಾನ್ ಜಹೀರಾ ಬಾನು ಹೇಳಿದರು. ತಾಲೂಕಿನ ಕೋಟಗಲ್ ಗ್ರಾಪಂ 2ನೇ ಅವಧಿಗೆ ನಡೆದ ನೂತನ ಅಧ್ಯಕ್ಷ ಚುನಾವಣೆಯಲ್ಲಿ 17 ಜನ ಗ್ರಾಪಂ ಸದಸ್ಯರು ಹಾಜರಿದ್ದು, ಸಾಮಾನ್ಯ ಮಹಿಳೆ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಂಜುಮಾನ್ ಜಹೀರಾ ಬಾನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ತಾಪಂ ಕಾರ್ಯನಿರ್ವಣಾಧಿಕಾರಿ ವಸಂತ್ ಕುಮಾರ್ ಘೋಷಿಸಿದರು. ತಾಪಂ ಉಪಾಧ್ಯಕ್ಷ ನಾಗರಾಜ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರಿಯಣ್ಣ, ಉಪಾಧ್ಯಕ್ಷ ಉಮಾಭಾಯಿ, ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ, ಲಕ್ಷ್ಮಿದೇವಕೋಟೆ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ ಇದ್ದರು.
ಕೋಲಾಟ ಸ್ಪರ್ಧೆ ದ್ವಿತೀಯ ಸ್ಥಾನ
ಮುಳಬಾಗಲು: ತಾಲೂಕಿನ ಗೊಟ್ಟುಕುಂಟೆ ಗ್ರಾಮದ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳು ಕೋಲಾರ ಜಿಲ್ಲಾ  ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ದ್ವಿತೀಯ ಸ್ಥಾನ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತೃತೀಯ ಸ್ಧಾನ ಪಡೆದಿದ್ದಾರೆ.
ಸ್ಪರ್ಧಾಳುಗಳು ಜಿ.ಕೆ. ಜಯಂತ್, ಆರ್.ಎಸ್. ತೇಜಸ್ಸಿನಿ, ಮಂಜುನಾಥ್, ವಿ. ಮಂಜುನಾಥ್, ವಿದ್ಯಾಶ್ರೀ, ಉಮಾ, ಮುಖ್ಯ ಶಿಕ್ಷಕ ಕೆ.ಎನ್. ತಾಯಲೂರಪ್ಪ, ಸಹೋಪಾಧ್ಯಾಯ ವಿ. ಉಮಾ ಭಾಗವಹಿಸಿದ್ದರು. ಮಕ್ಕಳು ಹಾಗೂ ಸಿಬ್ಬಂದಿಯನ್ನು ಶಾಲಾಭಿದ್ಧಿ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ಮಾಲೂರು: ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಎಕ ರೀತಿಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ  ಇಲ್ಲಿನ ಲಲಿತಾ ಅಕಾಡಮಿ ವಿದ್ಯಾರ್ಥಿ ಸನೋಜ್ಬಾಬು ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕೆ ಆಯ್ಕೆಯಾಗಿದ್ದಾರೆ. ಸನೋಜ್ ರಾಜ್ಯ ಮಟ್ಟದಲ್ಲೂ ವಿಜೇತರಾಗಿ ತಾಲೂಕಿಗೆ ಹೆಸರು ತರಲಿ ಎಂದು ಲಲಿತಾ ಅಕಾಡಮಿಯ ಶಾಲೆಯ ಕಾರ್ಯದರ್ಶಿ ಕೆ. ಉಮೇಶ್ ಹಾಗೂ ಇತರೆ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಅಧ್ಯಕ್ಷರ ಗುಂಪಿಗೆ ಮುಖಭಂಗ
ಟೇಕಲ್: ಕೊಂಡಶೆಟ್ಟಹಳ್ಳಿ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರ ಬಲ ಹೆಚ್ಚಿದ್ದರೂ ರಾಜಕೀಯ ಆಟವಾಡಿದ ಅಧ್ಯಕ್ಷರ ಗುಂಪಿಗೆ ಈ ಭಾರಿ ಜೆಡಿಎಸ್ ಸದಸ್ಯರು ಬುದ್ದಿ ಕಲಿಸಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ತಿಳಿಸಿದರು. ಕೊಂಡಶೆಟ್ಟಹಳ್ಳಿ ಗ್ರಾಪಂ ಆವರಣದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ 12 ಗ್ರಾಪಂ ಸದಸ್ಯರಿಗೆ ಅಭಿನಂದಿಸಿ ಮಾತನಾಡಿ, ಕೊಂಡಶೆಟ್ಟಹಳ್ಳಿ ಗ್ರಾಪಂನಲ್ಲಿ ಜೆಡಿಎಸ್ ಸ್ಥಾನ ಪಡೆದಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ಆದೇಶಕ್ಕೆ ಬದ್ದರಾಗಿರುತ್ತಾರೆ ಎಂದರು. ಆನೇಪುರ ಹನುಮಂತಪ್ಪ ಮಾತನಾಡಿದರು. ಕೊಂಡಶೆಟ್ಟಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಶೈಲಜಾಶ್ರೀನಿವಾಸ್, ಸದಸ್ಯರಾದ ಕೆ.ಎನ್. ವೆಂಕಟೇಶ್ ಗೌಡ, ಕೆ.ಆರ್.ನಾರಾಯಣಸ್ವಾಮಿ, ಎಸ್. ಕೆಂಪರಾಜು, ಹೇಮಾವತಿಹುಚ್ಚಪ್ಪ, ಜಯಮ್ಮಅಬ್ಬಯ್ಯ, ಲಕ್ಷ್ಮಮ್ಮಮುನಿಸ್ವಾಮಿ, ನಾರಾಯಣಮ್ಮ,ನಾಗರಾಜಾಚಾರಿ, ಕೆ.ಎಸ್. ಶಿವರಾಜ್, ಕೆ.ಅರುಣಾಶ್ರೀನಿವಾಸ್, ಎಂ. ನಂದೀಶಪ್ಪ ಇದ್ದರು.
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಮುಳಬಾಗಲು: ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾಠೋಪಕರಣ, ಕಂಪ್ಯೂಟರ್ ಹಾಗೂ ಸೋಲಾರ್ ದೀಪಗಳನ್ನು ವಿತರಿಸಲಾಗುವುದೆಂದು ಶಾಸಕ  ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶುಕ್ರವಾರ ಸೈಕಲ್ ವಿತರಿಸಿ ಮಾತನಾಡಿ, 2ನೇ ಹಂತದಲ್ಲಿ ಅನುದಾನಿತ ಶಾಲೆಗಳಿಗೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೂ ನೀಡಲಾಗುವುದು ಎಂದರು. ವಿದ್ಯಾರ್ಥಿಗಳನ್ನು ತಿದ್ದುವುದು, ಪ್ರತಿಭಾವಂತರನ್ನಾಗಿ ಮಾಡುವುದು ಶಿಕ್ಷಕರ ಜವಾಬ್ದಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್ ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ವೆಸ್ಟ್ ಪ್ರಾಯೋಜಿಕತ್ವದಲ್ಲಿ ಇ ಪೀಠೋಪಕರಣ, ಕಂಪ್ಯೂಟರ್ ಹಾಗೂ ಸೋಲಾರ್ ದೀಪಗಳನ್ನು ಶಾಸಕರು ವಿತರಿಸಿದರು. ತಾಪಂ ಮಾಜಿ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ಉತ್ತನೂರು ಶ್ರೀನಿವಾಸ್, ಆರ್.ಜಿ. ವೆಂಕರಾಮರೆಡ್ಡಿ, ಜಿಪಂ ಸದಸ್ಯೆ ಇಂದಿರಾ ಶ್ರೀನಿವಾಸ್, ಕೆ.ವಿ. ಜಗನ್ನಾಥ್, ಸುಬ್ಬರಾಯಪ್ಪ ಇದ್ದರು.
ಜೂಜಾಟ 13ಜನರ ಬಂಧನ
ಮುಳಬಾಗಲು: ಪಟ್ಟಣದ ಹೊರವಲಯದ ತಿರುಪತಿ ಗಂಗಮ್ಮ  ದೇವಾಲಯದ ಬಳಿ ಗುರುವಾರ ಸಂಜೆ ಅಂದರ್ ಬಾಹರ್ ಆಡುತ್ತಿದ್ದ ಹಾಗೂ ಅತ್ತಿಕುಂಟೆಯಲ್ಲಿ ಕೋಳಿ ಪಂದ್ಯವಾಡುತ್ತಿದ್ದ 8 ಜನರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸುಬ್ಬರೆಡ್ಡಿ, ಸೀನಪ್ಪ, ಷಣ್ಮುಗಮ್ಮ, ಹೊಸಪಾಳ್ಯದ ನಾಗರಾಜ್, ಷಾಮೀರ್, ಮೊಹಲ್ಲಾದ ಅಲ್ಲಾಬಕಶ್ ಬಂಧಿತರು. ತಾಲೂಕಿನ ಅತ್ತಿಕುಂಟಿ ಗ್ರಾಮದ ನಾರಾಯಣಪ್ಪ ಜಮೀನಿನಲ್ಲಿ ಕೋಳಿ ಪಂದ್ಯಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು ಆಡುತ್ತಿದ್ದ 8 ಜನರನ್ನು ಬಂಧಿಸಿರುವುದಾಗಿ ಮುಳಬಾಗಲು ಪೊಲೀಸರು ತಿಳಿಸಿದ್ದಾರೆ. ಅಸಲಿ ಅತ್ತಿಕುಂಟೆ ಸೀನಪ್ಪ, ವಿಜಲಾಪುರ ಸುಬ್ರಮಣೆ, ಚಿನ್ನಪ್ಪಯ್ಯ, ವರದಗಾನಹಳ್ಳಿ ಮುನಿಯಪ್ಪ, ಚಂದ್ರಪ್ಪ, ಚಿಕ್ಕಚನ್ನಪ್ಪ, ರಾಮಪ್ಪ, ಅಜ್ಜಪ್ಪ ಬಂಧಿತರು. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜೀತವಿಮುಕ್ತರಿಗೆ ಪುನರ್ವಸತಿ ಕಲ್ಪಿಸಿ
ಶಿಡ್ಲಘಟ್ಟ: ಜೀತ ವಿಮುಕ್ತಿಗಾಗಿ ಸರ್ಕಾರ ಕ್ರಮ ತೆಗೆದುಕೊಂಡಿದ್ದರೂ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜೀತವಿಮುಕ್ತರಿಗೆ ನೀಡಬೇಕಾದ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಾಲೂಕು ಜೀವಿಕ ಸಂಘಟನೆ ಪಧಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ, ಕಳೆದ ಡಿಸೆಂಬರ್ 15 ರಂದು ಒರಿಸ್ಸಾ ರಾಜ್ಯದಲ್ಲಿ ಇಬ್ಬರು ಜೀತದಾಳುಗಳ ಕೈಗಳನ್ನು ಕತ್ತರಿಸಿದ್ದು, ಜೀತ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜೀವಿಕ ತಾಲೂಕು ಸಂಚಾಲಕ ಗೆಜ್ಜಿಗಾನಹಳ್ಳಿ ರವಿಕುಮಾರ್, ತಾಲೂಕು ಸಂಚಾಲಕಿ ಶಶಿಕಲಾ, ಎಸ್. ಗೊಲ್ಲಹಳ್ಳಿ ನರಸಿಂಹಪ್ಪ, ಮುನಿಯಪ್ಪ, ಮಮತ, ಮುನಿಕೃಷ್ಣಪ್ಪ, ವೆಂಕಟೇಶ್, ಬಿ.ಎಂ. ಮುನಿರಾಜು, ಬಾಲರಾಜು ಇದ್ದರು.
ನಡಿಪಿನಾಯಕನಹಳ್ಳಿಯಲ್ಲಿ ಸೈಕಲ್ ವಿತರಣೆ
ಶಿಡ್ಲಘಟ್ಟ: ಗ್ರಾಮೀಣ ಮಕ್ಕಳ ವಿಧ್ಯಾಭ್ಯಾಸ ಪ್ರೋತ್ಸಾಹಿಸಲು ಸರ್ಕಾರ ಬಿಡುಗಡೆ ಮಾಡುತ್ತಿರುವ ಎಲ್ಲಾ ಯೋಜನೆಗಳು ಸದುಪಯೋಗವಾಗಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ತಾಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ನವೋದಯ ಶಾಲೆ ಕಪಿಲಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಬೈಸಿಕಲ್ ವಿತರಣೆ ಮಾಡುತ್ತಿದ್ದು, ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಸೈಕಲ್ಗಳನ್ನು ಮಕ್ಕಳು ಉಪಯೋಗಿಸುವಂತೆ ಜಾಗ್ರತೆ ವಹಿಸಬೇಕು ಎಂದರು. ಕೃಷ್ಣಮೂರ್ತಿ, ಕೆಂಪರೆಡ್ಡಿ, ನಾರಾಯಣಸ್ವಾಮಿ, ಜಯರಾಂ, ನಾಗರಾಜು, ತಾದೂರು ರಮೇಶ್, ಶ್ರೀನಿವಾಸಗೌಡ, ಮುನಿಕೃಷ್ಣಪ್ಪ, ದೊಣ್ಣಹಳ್ಳಿ ರಾಮಣ್ಣ, ನಂಜೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement