ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಮೆಲ್ ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

Mainashree
Updated On : 4 Jan 2014, 11:00 am

ಕೆಜಿಎಫ್: ಕೆಜಿಎಫ್‌ನ ವಿವಿಧ ಕಾಲೇಜುಗಳ ಮತ್ತು ಬೆಮೆಲ್ ಐಟಿಐ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಸಮರ್ಪಕವಾಗಿ ಕಲ್ಪಿಸುತ್ತಿಲ್ಲ ಮತ್ತು ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳನ್ನು ಬಸ್‌ಗಳಲ್ಲಿ ಹತ್ತಿಸದೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಬೆಮೆಲ್ ಐಟಿಐ ವಿದ್ಯಾರ್ಥಿಗಳು ಕೆಎಸ್‌ಆರ್ಟಿಸಿ ಬಸ್ ಡಿಪೋ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬೆಮೆಲ್ ಐಟಿಐ ಸೇರಿದಂತೆ ಇತರೆ ಕಾಲೇಜುಗಳಿಗೆ ಬರುವ ಬಡ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಪಾಸ್‌ಗಳನ್ನು ಪಡೆದಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ನಿಂತಿರುವಾಗ ಸರ್ಕಾರಿ ಬಸ್‌ಗಳು ನಿಲ್ಲಿಸದೆ ಹೋಗುತ್ತಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ತಿಳಿಸಿದರು.
ಕ್ರಮ ಕೈಗೊಡಿಲ್ಲ: ಬಸ್‌ಗಳನ್ನು ನಿಲ್ಲಿಸದೆ ಹೋಗುತ್ತಿರುವುದರಿಂದ ಬಸ್ ಪಾಸ್‌ಗಳಿದ್ದರೂ ವಿದ್ಯಾರ್ಥಿಗಳು ಒಂದೆರಡು ಕಿ.ಮೀ.ವರೆಗೆ ನಡೆದುಕೊಂಡು ಕಾಲೇಜುಗಳಿಗೆ ಹೋಗಬೇಕಾದ ಸ್ಥಿತಿ ಇದೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ದೂರುಗಳನ್ನು ನೀಡಿದ್ದರೂ ಈ ವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.  ಹಂಪ್ ನಿರ್ಮಿಸಿ: ಅದೇ ರೀತಿ ಬೆಮೆಲ್ ಕಾರ್ಖಾನೆಯ ಮುಂಭಾಗದ ಕೆಜಿಎಫ್‌ನಿಂದ ಕೋಲಾರಕ್ಕೆ ಹೋಗುವ ಪ್ರಮುಖ ರಸ್ತೆಯ ಪಕ್ಕದಲ್ಲೇ ಬೆಮೆಲ್ ಐಟಿಐ ಇದ್ದು, ಐಟಿಐ ಮುಂಭಾಗದ ಎರಡೂ ಕಡೆ ಯಾವುದೇ ವೇಗ ನಿಯಂತ್ರಣ ಹಂಪ್‌ಗಳು ಹಾಕದ ಕಾರಣ ವಾಹನಗಳು ಅತಿ ವೇಗವಾಗಿ ಓಡಾಡುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಹಂಪ್ ಹಾಕಬೇಕು ಎಂದು ಒತ್ತಾಯಿಸಿ ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರಾದ ಅಮಿತ್, ಸುನಿಲ್, ಶ್ರೀಕಾಂತ್, ವಿಜಯ್, ಮಂಜುನಾಥ್, ರಾಘವೇಂದ್ರ, ಸುಬ್ರಮಣಿ, ಸುರೇಶ್, ರಮೇಶ್, ಕುಮಾರ್, ಪ್ರವೀಣ್, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement