ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತ ಸಂಘದ ಹೆಸರಲ್ಲಿ ರಾಮೇಗೌಡ ಮೋಸ: ಆರೋಪ

Mainashree
Updated On : 4 Jan 2014, 11:00 am

ಬಂಗಾರಪೇಟೆ: ರೈತ ಸಂಘದ ಹೆಸರಲ್ಲಿ ವರ್ತಕರನ್ನು ಹಾಗೂ ಸಾರ್ವಜನಿಕರನ್ನು ವಂಚಿಸಿ ಹಣ ಸುಲಿಗೆ ಮಾಡುತ್ತಿರುವ ಸಂಘದ ಅಧ್ಯಕ್ಷ ರಾಮೇಗೌಡರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳೂಬೇಕೆಂದು ಆಗ್ರಹಿಸಿ ವರ್ತಕರು ವಹಿವಾಟು ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.
ಕಳೆದ ಕೆಲ ತಿಂಗಳಿಂದ ರೈತ ಸಂಘದ ಸ್ವಯಂ ಘೋಷಿತ ಅಧ್ಯಕ್ಷನೆಂದು ಹೇಳಿಕೊಂಡು ಜನರನ್ನು ವಂಚಿಸುತ್ತಾ ಮತ್ತೊಂದು ಕಡೆ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವ್ಯಾಪಾರಿಗಳನ್ನು ಬೆದರಿಸಿಕೊಂಡು ಅವರಿಂದ ಹಣ ಪಡೆಯುತ್ತಿದ್ದಾನೆ. ಅಲ್ಲದೆ ಆತ ರೈತನೇ ಅಲ್ಲ. ಇದರಿಂದ ಅನೇಕ ವ್ಯಾಪಾರಿಗಳು ಕಿರುಕುಳಕ್ಕೆ ಸಿಲುಕಿ ಪಟ್ಟಣವನ್ನೇ ಬಿಟ್ಟಿದ್ದಾರೆ, ಇನ್ನು ಕೆಲವರು ಊರು ಬಿಡುವ ತವಕದಲ್ಲಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಾಮೇಗೌಡರನ್ನು ಬಂಧಿಸಿ ಅವನನ್ನು ತಾಲೂಕಿನಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ನಾವು ಮುಕ್ತವಾಗಿ ವ್ಯಾಪಾರ ಮಾಡಲು ಆಗುವುದಿಲ್ಲ ಎಂದು ಹೇಳಿ ಪಟ್ಟಣದ ಕುವೆಂಪು ವೃತ್ತದಿಂದ ವರ್ತಕರು ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಮೇಗೌಡ ವಿರುದ್ದ ಘೋಷಣೆಗಳನ್ನು ಕೂಗಿ ನಂತರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ವರ್ತಕರ ಸಂಘದ ಅಧ್ಯಕ್ಷ ಗಿರೀಶ್‌ಕುಮಾರ್ ಮಾತನಾಡಿ, ತಾಲೂಕು ಆಡಳಿತ ಕೂಡಲೆ ರಾಮೇಗೌಡರಂತಹ ನಕಲಿ ನಾಯಕರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಅಂಗಡಿಗಳು ಮಾತ್ರ ಸಂಪೂರ್ಣ ಬಂದ್ ಆಗಿದ್ದವು.
ರಾಮೇಗೌಡ ಮಾಡಿರುವ ಕೆಲಸ ಸರಿಯಿಲ್ಲ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೆ ಅವರು ಕ್ರಮಕೈಗೊಳ್ಳುತ್ತಿದ್ದರು. ಮೊದಲು ದೂರು ನೀಡಿ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement