ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 4 Jan 2014, 11:00 am

3 ಕಾರುಗಳ ಗಾಜು ಒಡೆದ ದುಷ್ಕರ್ಮಿಗಳು
ತುಮಕೂರು: ತುಮಕೂರಿನ ಎಸ್.ಎಸ್. ಪುರಂನಲ್ಲಿ ಒಂದೇ ಮನೆಯ 3 ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳು ಕಲ್ಲು ತೂರಿ ಮೂರು ಪುಡಿಪುಡಿ ಮಾಡಿದ್ದಾರೆ. ಬಸವರಾಜು ಎಂಬುವರಿಗೆ ಸೇರಿದ ಮೂರು ಕಾರುಗಳನ್ನು ಗೇಟ್ ಒಳಗೆ ನಿಲ್ಲಿಸಲಾಗಿತ್ತು. ಕಳೆದ ರಾತ್ರಿ 12 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಗಾಜು ಒಡೆದು ಪರಾರಿಯಾಗಿದ್ದಾರೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.   
ಶರ್ಮಾ ವಿರುದ್ಧ ತನಿಖೆಗೆ ಆಗ್ರಹ
ತುಮಕೂರು: ತುಮಕೂರು ವಿವಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಘನತೆ ಮಾತ್ರವಲ್ಲದೆ ಜಿಲ್ಲೆಯ ಸಾಂಸ್ಕೃತಿಕ ಘನತೆಯನ್ನು ಬೀದಿಪಾಲು ಮಾಡಿರುವ ವಿಶ್ರಾಂತ ಕುಲಪತಿ ಡಾ. ಎಸ್.ಸಿ. ಶರ್ಮಾ ಆಡಳಿತ ಕಾಲದ ಸಮಗ್ರ ತನಿಖೆಗೆ ದಲಿತ ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಬಿ. ಸಿದ್ದಯ್ಯ ಆಗ್ರಹಿಸಿದ್ದಾರೆ. ಎಸ್.ಸಿ. ಶರ್ಮಾ ಅವರ ಆಡಳಿತ ಕಾಲದ ಎಲ್ಲಾ ಬಗೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅತಿಕ್ರಮಗಳು, ಸ್ವಜನ ಪಕ್ಷಪಾತ, ಮೀಸಲಾತಿ ನೇಮಕಾತಿಯಲ್ಲಿ ಒಂದೇ ಜಾತಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ವಿರುದ್ಧ ನಿಲುವಿನ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಈಜಲು ಹೋದ ಇಬ್ಬರು ಮಕ್ಕಳು ಕೆರೆ ಪಾಲು
ಮಾಲೂರು: ಕೆರೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳು ಮುಳುಗಿ ಸತ್ತಿರುವ ಘಟನೆ ತಾಲೂಕಿನ ಚಿಕ್ಕಸಬ್ಬೇನಹಳ್ಳಿ ಕೆರೆಯಲ್ಲಿ ಶನಿವಾರ ಸಂಜೆ ನಡೆದಿದೆ.
  ಮೃತರನ್ನು ದೊಡ್ಡಶಿವಾರ ಗ್ರಾಮದ ಚಂದನ್(8)ಹಾಗೂ ಜೀವನ್(10)ಎಂದು ಗುರುತಿಸಲಾಗಿದೆ. ಪಟ್ಟಣದ ಎಸ್‌ಎಫ್‌ಎಸ್ ವಿದ್ಯಾ ಸಂಸ್ಥೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಂದನ್ ಹಾಗೂ 5 ನೇ ತರಗತಿಯಲ್ಲಿ ಓದುತ್ತಿರುವ ಜೀವನ್ ಇಬ್ಬರು ಶನಿವಾರ ಶಾಲೆಗೆ ರಜೆ ನೀಡಿದ್ದ ಪರಿಣಾಮ ಕೆರೆಯಲ್ಲಿ ಈಜಲು ಗ್ರಾಮದಿಂದ ಒಂದೂವರೆ ಕಿ.ಮೀ. ದೂರದ ಕೋಲಾರ ರಸ್ತೆಯ ಚಿಕ್ಕಸಬ್ಬೇನಹಳ್ಳಿ ಕೆರೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಮಳೆ ನೀರು ಇದ್ದ ಕೆರೆಯಲ್ಲಿ ಹೂಳು ತುಂಬಿದ್ದೇ ಈ ದುರ್ಘಟನೆ ಕಾರಣ ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಎಸ್‌ಐ ಮಂಜುನಾಥ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement