ಸ್ವಾರ್ಥಕ್ಕಾಗಿ ರೈತ ಸಂಘದ ದುರ್ಬಳಕೆ
ಕ.ಪ್ರ.ವಾರ್ತ್ಣೆ ಕೋಲಾರ ಜ.4
ಬಂಗಾರಪೇಟೆ ತಾಲೂಕಿನಲ್ಲಿ ಅಕ್ರಮವಾಗಿ ಯಾರಾದರೂ ಅಕ್ಕಿಯನ್ನು ಸಾಗಾಣೆ ಮಾಡುತ್ತಿದ್ದರೆ ಅಂತಹವರ ವಿರುದ್ಧ ಸೂಕ್ತವಾದ ಸಾಕ್ಷಿಗಳ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿದುಕೊಟ್ಟು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪ್ರಾಮಾಣಿಕತೆ ಪ್ರದರ್ಶಿಸಬೇಕೇ ಹೊರತು ಹಣಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ರೈತ ಸಂಘದ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದೆಂದು ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ಮುಖಂಡರು ತಿಳಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಅಕ್ಕಿ ಗಿರಣಿ ಮಾಲೀಕರೊಬ್ಬರು ರೈತ ಸಂಘದ ಮುಖಂಡ ಜಿ. ರಾಮೇಗೌಡ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆಂದು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ರೈತ ಸಂಘದ ಮುಖಂಡರು ಶನಿವಾರ ಕೋಲಾರದಲ್ಲಿ ಸಭೆ ನಡೆಸಿ ಇಂತಹ ಹೇಳಿಕೆಗಳಿಂದ ಸಂಘದ ಘನತೆ-ಗೌರವಕ್ಕೆ ಧಕ್ಕೆ ಆಗುತ್ತದೆ, ರೈತ ಸಂಘದ ತತ್ವ ಸಿದ್ಧಾಂತದ ಬಗ್ಗೆ ಗೌರವಯುಳ್ಳ ಯಾವುದೇ ಕಾರ್ಯಕರ್ತ ಇಂತಹ ಆರೋಪಗಳು ಬರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಪೀಡಿಸುತ್ತಿರುವುದು ಚರ್ಚೆಯಾಗಿ ಬುದ್ಧಿ ಹೇಳಲಾಗಿದ್ದರೂ ಇವರು ಇವರ ಕೆಟ್ಟ ಚಾಳಿಯನ್ನು ಬಿಡದೆ ತಮ್ಮ ಜೀವನಕ್ಕಾಗಿ ರೈತ ಸಂಘವನ್ನು ಬಳಸಿಕೊಂಡು ಹಣ ಮಾಡುವ ದಂಧೆಯಲ್ಲಿ ತೊಡಗಿರುವುದು ದುರಾದಣಷ್ಟಕರ ಎಂದು ರೈತ ಸಂಘದ ಜಿಲ್ಲಾ ಮುಖಂಡರು ಹೇಳಿದರು.
ಬಂಗಾರಪೇಟೆಯಲ್ಲಿ ಅತಿ ಹೆಚ್ಚು ಅಕ್ಕಿ ಗಿರಣಿಗಳು ಇದ್ದು ಎ.ಪಿ.ಎಂ.ಸಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಹಿವಾಡು ಮಾಡುತ್ತಿದ್ದು ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಗೆ ನೀಡುವ ಅಕ್ಕಿಯನ್ನು ಯಾರಾದರೂ ಅಕ್ರಮವಾಗಿ ಸಾಗಾಣಿಕೆ ಮಾಡಿದರೆ ಅಂತಹವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು, ಈ ಬಗ್ಗೆ ನಿಷ್ಠಾವಂತ ಅಧಿಕಾರಿಗಳನ್ನು ತನಿಖಾ ಅಧಿಕಾರಿಗಳನ್ನಾಗಿ ನೇಮಿಸಲು ಜಿಲ್ಲಾಧಿಕಾರಿಗಳು ಹಾಗು ಶಾಸಕರು ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಸಂಸ್ಥಾಪಕ ಎ.ಡಿ. ಸುಂದ್ರೇಶ್, ಎಂ.ಡಿ. ನಂಜುಂಡಸ್ವಾಮಿ ಹಾಗೂ ಸಂಘದ ಹಾಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತ ಹಾಗೂ ಜನಪರ ಹೋರಾಟದ ಮೂಲಕ ಸಂಘಕ್ಕೆ ಒಳ್ಳೆ ಹೆಸರು ತಂದುಕೊಟ್ಟಿದ್ದಾರೆ. ಈ ಸಂಘದ ಯಾವುದೇ ಕಾರ್ಯಕರ್ತ ಅಥವಾ ಮುಖಂಡ ಸಂಘದ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳಬಾದರು, ಒಂದು ವೇಳೆ ಅನ್ಯಾಯ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮೂಲಕ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಬೇಕೇ ವಿನಃ ಅಕ್ರಮವನ್ನು ತಡೆಗಟ್ಟುವ ನೆಪದಲ್ಲಿ ಹಣ ಕೇಳುವ ಮೂಲಕ ಸಂಘಕ್ಕೆ ಕೆಟ್ಟ ಹೆಸರು ತರಬಾರದೆಂದು ಎಚ್ಚರಿಕೆ ನೀಡಿದರು.
ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ರೈತ ಸಂಘದ ಹೆಸರಿನಲ್ಲಿ ಯಾರಾದರೂ ರೋಲ್‌ಕಾಲ್ ಮಾಡಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡರಾದ ತೆರನಹಳ್ಳಿ ವೆಂಕಟೇಶ್ ಗೌಡ, ಕೋಟಿಗಾನಹಳ್ಳಿ ಗಣೇಶ್ ಗೌಡ, ಮಾಲೂರು ಅಶ್ವಥ್‌ರೆಡ್ಡಿ, ಸಿ,ವಿ ಪ್ರಭಾಕರ್, ಮುಜಿಬ್‌ಪಾಷ, ಲಕ್ಷ್ಮೀಸಾಗರ ಕೃಷ್ಣಾರೆಡ್ಡಿ, ತೊರನದೊಡ್ಡಿ ಮಂಜುನಾಥ್, ನಾಗೇಶ್ ಗೌಡ, ಮುಳಬಾಗಲು ಶಿವರಾಜ್, ಚಿಕ್ಕತಿರುಪತಿ ಸಿದ್ದಾರೆಡ್ಡಿ, ಕೂತಂಡಹಳ್ಳಿ ನಾರಾಯಣಸ್ವಾಮಿ, ಚಂದ್ರಪ್ಪ, ಟಿ.ವಿ. ಮುರಳಿ, ದೊಡ್ನಹಳ್ಳಿ ಕೃಷ್ಣಪ್ಪ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ನಿದರಮಂಗಲ ನಾಗಪ್ಪ ಇದ್ದರು.