ಕಲಿನಾತೇಶ್ವರ ದೇವಸ್ಥಾನ ರಸ್ತೆ ಕಾಮಗಾರಿಗೆ ಚಾಲನೆ
ಗೌರಿಬಿದನೂರು: ಸಮೀಪದ ಕಲಿನಾತೇಶ್ವರ ದೇವಸ್ಥಾನಕ್ಕೆ ಸುಮಾರು 500 ಮೀಟರ್ ರಸ್ತೆ ನಿರ್ಮಾಣಕ್ಕೆ ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಚಾಲನೆ ನೀಡಿದರು.
ಸುಮಾರು 2 ಲಕ್ಷ ವೆಚ್ಚದಲ್ಲಿ 40 ಅಡಿ ಅಗಲದ ವಿಶಾಲವಾಗಿ ನಿರ್ಮಿಸಲು ಸೂಚಿಸಿದ್ದು, ದೇವಾಲಯವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದ ಅವರು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದಿಂದ ಈ ಕಾಮಗಾರಿಯನ್ನು ಮಾಡಲಾಗುತ್ತಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗುವುದು ಎಂದು ಕಿರಿಯ ಅಭಿಯಂತರ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಜಿ. ವೇಣುಗೋಪಾಲರೆಡ್ಡಿ, ಪುರಸಭಾ ಮಾಜಿ ಉಪಾಧ್ಯಕ್ಷ ಕಲ್ಲೂಡಿ ಕಾಂತರಾಜು, ವೆಂಕಟಪ್ಪ, ನಂಜುಂಡಗೌಡ, ಕ್ಯಾಪ್ಟನ್ ಸತೀಶ್, ಜಿ.ವಿ. ಕೃಷ್ಣಮೂರ್ತಿ, ವಿ.ಪಿ. ನಾರಾಯಣಗೌಡ, ಗಂಗಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ನರಸಿಂಹಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.