ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ಮೇಲ್ಸೇತುವೆ ಮೇಲೆ ವಾಹನ ಸವಾರರ ಪರದಾಟ

Mainashree
Updated On : 6 Jan 2014, 12:30 pm

ಕೋಲಾರ: ನಗರದ ಟವರ್ ಕ್ಲಾಕ್ ಬಳಿಯ ರೇಲ್ವೆ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಉದ್ಘಾಟನೆಗೆ ಮುಂಚೆಯೇ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿರುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.
ಸೇತುವೆಯ ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಾಹನಗಳು ಓಡಾಡುತ್ತಿದ್ದು, ಕಿರಿದಾದ ರಸ್ತೆಯಲ್ಲಿ ಎದುರು ಬದುರು ಬರುವ ಲಾರಿ, ಬಸ್ಸುಗಳು ಮುಂದೆ ಸಾಗಲು ದಾರಿ ಇಲ್ಲದೆ ನಿಲುಗಡೆಯಾಗುತ್ತವೆ. ಇತರೆ ವಾಹನಗಳು ಸಂಚಾರ ದಟ್ಟಣೆಯಿಂದ ಗಂಟೆಗಟ್ಟಲೆ ನಿಲ್ಲುವುದರಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಅಧಿಕಾರಿಗಳಿಗೆ ಒತ್ತಾಯ: ಬಾಕಿ ಉಳಿದಿರುವ ಕಾಮಗಾರಿ ಮುಗಿಯುವ ತನಕ ವಾಹನ ಸಂಚಾರ ನಿರ್ಭಂದಿಸಬೇಕಾಗಿತ್ತು, ಇಲ್ಲವೇ ಸೇತುವೆಯ ಮೇಲಿನ ಎರಡು ಕಡೆಯ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಬೈಸಿಕಲ್, ಮೋಟಾರ್ ಸೈಕಲ್, ಆಟೋ ರಿಕ್ಷಾ, ಎತ್ತಿನ ಗಾಡಿಯ ಸವಾರರು ಎದುರಿಸುತ್ತಿರುವ ತೊಂದರೆ ನಿವಾರಿಸಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸೇತುವೆಯ ಮೇಲೆ ಅರ್ಧಕ್ಕೆ ನಿಂತಿರುವ ರಸ್ತೆ ವಿಭಜಕ ಕಾಮಗಾರಿಯನ್ನು ಬೇಗನೆ ಮುಗಿಸಬೇಕು, ದೀಪಗಳ ಅಳವಡಿಕೆ ಹಾಗೂ ರಕ್ಷಣಾ ವ್ಯವಸ್ಥೆ ಮಾಡಿ ಅದಷ್ಟು ಬೇಗನೆ ವಾಹನಗಳ ಕ್ರಮಬದ್ಧ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement