ಸೀಮೆಎಣ್ಣೆ ಸ್ಟೌವ್ ಸಿಡಿದು ಯುವತಿ ಸಾವು
ಕೆಜಿಎಫ್: ಸೀಮೆ ಎಣ್ಣೆ ಸ್ಟೌವ್ ಸ್ಫೋಟಗೊಂಡು ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರಿಕುಪ್ಪಂನ ಪಿ.ಒ. ಬ್ಲಾಕ್ ನಿವಾಸಿ ಪ್ರವೀನ್ಕುಮಾರ್ ಎಂಬುವರ ಮಗಳು ಸ್ನೇಹ(21) ಮೃತ ಯುವತಿ. ಜ.1ರಂದು ಅಡುಗೆ ಮಾಡುವ ವೇಳೆ ಸ್ಟೌವ್ ಸಿಡಿದು ಘಟನೆ ಸಂಭವಿಸಿತ್ತು. ಮೈಮೇಲೆ ಕೆಲ ಸುಟ್ಟ ಗಾಯಗಳಾಗಿದ್ದವು. ಈಕೆಯನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಅದರಂತೆ ಸ್ನೇಹಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮಾರಿಕುಪ್ಪಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.