ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 6 Jan 2014, 12:31 pm

ನಾಳೆ ಸಚಿವರಿಂದ ಪ್ರಗತಿ ಪರಿಶೀಲನೆ
ಕೋಲಾರ: ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಜ.7ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣೆ ನಡೆಸಿ ನಂತರ 11.30ಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆ ನಂತರ ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರೇಷ್ಮೆ ಬೆಳೆಗಾರರ ಸಂಘಕ್ಕೆ ಆಯ್ಕೆ
ಕೋಲಾರ: ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರ್. ಮುನೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಬೀದ್ ಹುಸೇನ್ ತಿಳಿಸಿದ್ದಾರೆ. ಜ.3ರಂದು ನಿಗದಿಯಾಗಿದ್ದ ಚುನಾವಣೆಗೆ ಆರ್. ಮುನೇಗೌಡ ಹೊರತುಪಡಿಸಿ ಬೇರೆ ಯಾರು ಅರ್ಜಿ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಣ್ಣಪ್ಪ ಪೂಜಾರಿಗೆ ಪಿಎಚ್.ಡಿ
ಕೋಲಾರ: ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ಸಹ ಪ್ರಾಧ್ಯಾಪಕ ಅಣ್ಣಪ್ಪ ಪೂಜಾರಿಯವರು ಸಲ್ಲಿಸಿದ ಏಜ್ ರಿಲೇಟೆಡ್ ಎಫೆಕ್ಟ್ಸ್ ಆಫ್ ಇನ್ ಸೆಕ್ಟಿಸೈಡ್ ಟ್ಯಾಕ್ಸಿ ಸಿಟಿ ಅಂಡ್ ಕೋಲ್ಡ್ ಟ್ರೀಸ್ ಇಂಟರಾಕ್ಟಿವ್ ಎಫೆಕ್ಟ್ಸ್ ಆನ್ ಸೆಂಟ್ರಲ್ ನರ್ವಸ್ ಸಿಸ್ಟಮ್ ಆಫ್ ರ್ಯಾಟ್ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಅಣ್ಣಪ್ಪ ಪೂಜಾರಿರವರು ಬೆಂಗಳೂರಿನ ಡಾ. ಮೆಹಬೂಬ್ ಬಾಷ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಪ.ಜಾ.ಗೆ ಆಯ್ಕೆ
ಗುಡಿಬಂಡೆ: ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಪ.ಜಾತಿ ವಿಭಾಗಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.  ಅಧ್ಯಕ್ಷಾಗಿ ಪ್ರೆಸ್ ಸುಬ್ಬಾರಾಯಪ್ಪ, ಉಪಾಧ್ಯಕ್ಷರಾಗಿ ಕೆ.ಎ. ನಾರಾಯಣಸ್ವಾಮಿ,ಎಲ್.ವಿ. ಗುರ್ರಪ್ಪ, ತಿಪ್ಪನ್ನ, ಕಾರ್ಯದರ್ಶಿಗಳಾಗಿ ನರಸಿಂಹಮೂರ್ತಿ, ಎಂ. ಶ್ರೀನಿವಾಸಮೂರ್ತಿ, ವಿ. ಶ್ರೀನಿವಾಸ್, ಆದಿನಾರಾಯಣಪ್ಪ, ಸದಸ್ಯರಾಗಿ ಅಶ್ವತ್ಥಪ್ಪ, ಮುದ್ದುಕೃಷ್ಣ, ಕೆ.ವಿ. ಚಿಕ್ಕನಾರಾಯಣಪ್ಪ, ಬಿ. ಆದಿನಾರಾಯಣಪ್ಪ, ಚಿಕ್ಕವೆಂಕಟೇಶ್, ಜಿ.ಸಿ. ಅಶ್ವತ್ಥಪ್ಪ, ವೆಂಕಟೇಶಪ್ಪ, ಓಬಳಪ್ಪ, ಸತ್ಯಪ್ಪ, ಬೈಯಣ್ಣ, ಶಂಕರಪ್ಪ, ಸುಬ್ರಮಣ್ಯ ಮತ್ತು ಪೆದ್ದಾಯ್ಯಪ್ಪ ಆಯ್ಕೆಯಾಗಿದ್ದಾರೆ.
ಚಪ್ಪಲ್ಲೆ ಶ್ರೀನಿವಾಸಮೂರ್ತಿಗೆ ಕುವೆಂಪು ಸದ್ಭಾವನಾ ಪ್ರಶಸ್ತಿ
ಕೋಲಾರ: ನಿವೃತ್ತ ಶಿಕ್ಷಕ ಹಾಗೂ ಜ್ಯೋತಿಷ್ಯ ತಜ್ಞರಾದ ಬಂಗಾರಪೇಟೆಯ ಚಪ್ಪಲ್ಲೆ ಶ್ರೀನಿವಾಸಮೂರ್ತಿ ಅವರಿಗೆ ಸುರ್ವೆ ಕಲ್ಚರಲ್ ಅಕಾಡೆಮಿ ಕೊಡಲಾಗುವ ಕುವೆಂಪು ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಕಲಾ ಉತ್ಸವದಲ್ಲಿ ಈ ಸಾಲಿನ ಪ್ರಶಸ್ತಿಯನ್ನು ಶ್ರೀನಿವಾಸಮೂರ್ತಿಯವರಿಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಇಲಾಖೆಯ ಕಾರ್ಯದರ್ಶಿ ಸಿ. ಸೋಮಶೇಖರ್ ವಹಿಸಿದ್ದರು. ಹೆಗ್ಗುಂದಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಹಾ ಸುಕ್ಷೇತ್ರ ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ. ಶಿವಶಂಕರ್, ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಮೇಯರ್ ಹುಚ್ಚಪ್ಪ, ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಸುರ್ವೆ ರಮೇಶ್, ನಿವೃತ್ತ ಕಾರ್ಯನಿರ್ವಾಹಕ ಎಂಜನಿಯರ್ ಎಂ.ಜಿ. ಸೋಮಶೇಖರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.  ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಸನ್ಮಾನಿಸಲಾಯಿತು. ಚಪ್ಪಲ್ಲೆ ಶ್ರೀನಿವಾಸಮೂರ್ತಿ ಅವರು ಹುಟ್ಟಿ, ಬೆಳೆದಿದ್ದು ಬಂಗಾರಪೇಟೆಯಲ್ಲಿ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement