ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆರ್ಥಿಕ ನೆರವು ನೀಡಿ ಬೆಂಬಲಿಸಲು ಮನವಿ

Mainashree
Updated On : 6 Jan 2014, 11:32 am

ಶಿಡ್ಲಘಟ್ಟ: ಸ್ವಾತಂತ್ರ್ಯ ಹೋರಾಟವೂ ಸೇರಿದಂತೆ ದೇಶದ ದಲಿತರ, ನಿರಾಶ್ರಿತರ, ಕೃಷಿ ಕೂಲಿ ಕಾರ್ಮಿಕರ ಧ್ವನಿಯಾಗಿ ಹೋರಾಟಗಳನ್ನು ಮಾಡುತ್ತಿರುವ ಸಿಪಿಐಎಂ ಪಕ್ಷದ ಹೋರಾಟಗಳಿಗೆ ಬೆಂಬಲಿಸಲು ಆರ್ಥಿಕ ನೆರವು ನೀಡುವಂತೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ಹೇಳಿದರು.
ಪಟ್ಟಣದ ಬೀದಿಗಳಲ್ಲಿ ಪಕ್ಷದ ಪರವಾಗಿ ದೇಣಿಗೆಯನ್ನು ಸಂಗ್ರಹಿಸಿದ ಅವರು, ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸಿ, ಪ್ರಜಾಸತ್ತಾತ್ಮಕ ಚಳವಳಿಗಳನ್ನು ದಮನ ಮಾಡುತ್ತಿರುವ ಸರ್ಕಾರದ ವಿರುದ್ಧ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಎಡ ಪ್ರಜಾಪ್ರಭುತ್ವ ಚಳವಳಿಯ ಬಲಿಷ್ಠವಾಗಿ ಬೆಳೆಯುವುದು ಇಂದು ಅಗತ್ಯವಾಗಿದೆ. ಇಂತಹ ಚಳವಳಿ, ಹೋರಾಟಗಳನ್ನು ನಡೆಸಬೇಕಾದರೆ ಹಣಕಾಸಿನ ಅವಶ್ಯಕತೆಯಿದೆ ಈ ಹಣಕ್ಕಾಗಿ ಯಾವುದೇ ಬಂಡವಾಳ ಶಾಹಿಗಳೊಂದಿಗೆ ಶಾಮೀಲಾಗದೆ, ನೇರವಾಗಿ ನಾವು ಯಾರಿಗಾಗಿ ಹೋರಾಟ ಮಾಡುತ್ತೇವೋ ಅವರಿಂದಲೇ ದೇಣಿಗೆಯನ್ನು ಸಂಗ್ರಹಿಸಿ ಹೋರಾಟದ ಹಾದಿಯನ್ನು ಮುನ್ನಡೆಸುತ್ತೇವೆ ಎಂದರು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುಕರ್ ಮುನೀಂದ್ರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ಮುಖಂಡ ರಾಮಚಂದ್ರಪ್ಪ, ಚನ್ನರಾಯಪ್ಪ, ರಘುರಾಮರೆಡ್ಡಿ, ಬಿ.ಎನ್. ಮುನಿಕೃಷ್ಣಪ್ಪ, ಮಳ್ಳೂರು ಶಿವಣ್ಣ, ನರಸಿಂಹ, ಚಂದ್ರಶೇಖರ್, ಸುಮತಿ, ರಾಜಶೇಖರ್, ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement