ನಗು- ಮಗು ಯೋಜನೆಗೆ ಚಾಲನೆ
ಮಾಲೂರು: ಬಾಣಂತಿ- ಮಗುವಿನ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ನಗು- ಮಗು ಯೋಜನೆಯಡಿ ಅನುಷ್ಠಾನಗೊಳಿಸಿರುವ ಆಂಬ್ಯುಲೆನ್ಸ್ ವ್ಯವಸ್ಥೆಯ ಯೋಜನೆ ಉತ್ತಮವಾಗಿದ್ದು, ಗ್ರಾಮೀಣ ಭಾಗದ ಜನತೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಇಲ್ಲಿನ ಸಾರ್ವಜನಿಕರ ಆಸ್ವತ್ರೆಯಲ್ಲಿ ನಗು- ಮಗು ಯೋಜನೆಯ ಆಂಬ್ಯುಲೆನ್ಸ್ಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಈ ಯೋಜನೆಯು ಗ್ರಾಮೀಣ ಭಾಗದ ಬಡ ಜನತೆಗೆ ಸಿಗುವಂತಾಗಬೇಕು. ಗ್ರಾಮೀಣ ಭಾಗದಲ್ಲಿ ಸರಿಯಾದ ರಸ್ತೆ, ಆಸ್ಪತ್ರೆಯ ಸೌಲಭ್ಯವಿಲ್ಲದೆ ಗರ್ಭಿಣಿಯರು ಬಹಳ ತೊಂದರೆ ಅನುಭವಿಸುತ್ತಿದ್ದರು. ಈ ಯೋಜನೆ ಸಹಕಾರವಾಗುವಂತೆ ಉಪಯೋಗವಾಗಬೇಕು ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ಗೌಡ, ತಾಪಂ ಸದಸ್ಯ ಮೂರ್ತಿ, ಪುರಸಭೆ ಸದಸ್ಯ ಮುರಳೀಧರ್, ಜಾಕೀರ್ಖಾನ್, ಜೆಡಿಎಸ್ ಮುಖಂಡ ನಂಜೇಗೌಡ, ಮಂಜುನಾಥ್ಗೌಡ, ಬಚ್ಚೇಗೌಡ, ಮಂಜು, ಸುರೇಶ್, ಕನ್ನಡ ಹರೀಶ್, ನಾರಾಯಣಸ್ವಾಮಿ ಇದ್ದರು.