ವಿಷಮಿಶ್ರಿತ ನೀರು ಕುಡಿದು 20 ಕುರಿಗಳ ಸಾವು
ಬಂಗಾರಪೇಟೆ: ವಿಷಮಿಶ್ರಿತ ನೀರು ಕುಡಿದು 20 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೂದಿಕೋಟೆ ಮಾರ್ಕಂಡೇಯ ಕೆರೆಯ ಬಳಿ ಸಂಭವಿಸಿದೆ.
ಹುಕ್ಕುಂದ ಗ್ರಾಮದ ಸೀನಪ್ಪ ಎಂಬುವರು ತಮ್ಮ ಆಲೂಗಡ್ಡೆ ತೋಟಕ್ಕೆ ಸಿಂಪಡಿಸಲು ನೀರಿನಲ್ಲಿ ಮಿಶ್ರಗೊಳಿಸಿ ಇಟ್ಟಿದ್ದ ಔಷಧಿ ನೀರನ್ನು ಕುರಿಗಳು ಮೃತಪಟ್ಟಿದೆ. ಉಳಿದ 10 ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೀನಪ್ಪ ಅರ್ಧ ತೋಟಕ್ಕೆ ಔಷಧಿ ಸಿಂಪಡಿಸಿ ಉಳಿದ ಔಷಧಿ ಮಿಶ್ರಿತ ನೀರನ್ನು ಬಕೆಟ್ನಲ್ಲಿ ಇಟ್ಟಿದ್ದಾಗ ಕುರಿಗಳು ಬಂದು ಕುಡಿದಿದೆ.
20 ಕುರಿಗಳ ಸಾವಿನಿಂದ ಮಾಲೀಕರಿಗೆ 1.5 ಲಕ್ಷ ನಷ್ಟವಾಗಿದೆ. ಹುನ್ಕುಂದ ಗ್ರಾಮದ ಮುನಿಯಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಬೂದಿಕೋಟೆ ಪಶುವೈದ್ಯ ಆಸ್ಪತ್ರೆಗೆ ಸೇರಿಸಿ ಚಿಕಿಕ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವೆ ಎಂದು ತಿಳಿಸಿದ್ದಾರೆ.
ಬರದಿಂದ ಬೆಂಡಾಗಿರುವ ರೈತರಿಗೆ ಈ ಅವಘಡ ಮತ್ತಷ್ಟು ಘಾಸಿಗೊಳಿಸಿದೆ. ಕುರಿಗಳನ್ನು ಕಳೆದುಕೊಂಡಿರುವ ಮುನಿಯಪ್ಪ ಜೀವನ ಇದರಿಂದಲೇ ನಡೆಯುತ್ತಿತ್ತು, ಈಗ ಕುರಿಗಳನ್ನು ಕಳೆದುಕೊಂಡಿರುವ ಮುನಿಯಪ್ಪ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮುನಿಯಪ್ಪರಿಗೆ ಪರಿಹಾರ ಕೊಡಬೇಕೆಂದು ಕೋರಿದ್ದಾರೆ.