ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕರ ಕೈಗೊಂಬೆಗಳಾಗಿರುವ ಅಧಿಕಾರಿಗಳು; ಗೌರಮ್ಮ

Mainashree
Updated On : 6 Jan 2014, 11:24 am

ಚಿಂತಾಮಣಿ: ಮಾಜಿ ಶಾಸಕ ಸುಧಾಕರ್ ಆಡಳಿತ ಕಾಲಾವಧಿಯಲ್ಲಿ ನಬಾರ್ಡ್ ಅನುದಾನದಿಂದ ನೂತನ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು, ಕಟ್ಟಡ ಉದ್ಘಾಟನೆಗೆ ಹೆಸರನ್ನು ಕೈಬಿಟ್ಟು ಅಧಿಕಾರಿಗಳು ಸ್ಥಳೀಯ ಶಾಸಕರ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಾಪಂ ಅಧ್ಯಕ್ಷೆ ಗೌರಮ್ಮ ನಾಗೇಶ್ ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಬಟ್ಲಹಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಭೆಯಲ್ಲಿ ತಾಳ್ಮೆ, ಸಹನೆ ಕಳೆದುಕೊಂಡು ಶಾಸಕ ಕೃಷ್ಣಾರೆಡ್ಡಿ ಅವರ ಬೆಂಬಲಿಗರು ರಾಜಕೀಯ ದುರುದ್ದೇಶದಿಂದ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಖಂಡನೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಹಿತದೃಷ್ಟಿಯಿಂದ ಮಾಜಿ ಶಾಸಕ ಸುಧಾಕರ್ ಅವರ ಆಡಳಿತಾವಧಿಯಲ್ಲಿ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದನ್ನು ಮರೆತು ಕ್ಷುಲ್ಲಕ ರಾಜಕಾರಣ ಮಾಡಿ ಸಭೆಯಲ್ಲಿ ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆದಿರುವುದು ಉತ್ತಮ ಬೆಳವಣಿಗೆಯಲ್ಲಿ ಎಂದರು.
ಜಿಪಂ ಸದಸ್ಯರಾದ ವೀಣಾಗಂಗುಲಪ್ಪ ಮಾತನಾಡಿ, ಜನರಿಂದ ಮತ ಪಡೆದು ವ್ಯಕ್ತಿಯ ಸ್ಥಾನಮಾನ ಮರೆತು ಸಭೆಯಲ್ಲಿ ಶಾಸಕರ ಬೆಂಬಲಿತ ಹಲವರು ನಡೆದುಕೊಂಡ ನಡತೆಯ ಬಗ್ಗೆ ಶಾಸಕರು ಸಭೆಯಲ್ಲಿ ಮೌನವಾಗಿರುವುದು ಸರಿಯಿಲ್ಲವೆಂದು ಹೇಳಿದರು.
ಕಾರ್ಯಕ್ರಮವನ್ನು ಅಧಿಕಾರಿಗಳೇ ಆಯೋಜಿಸಿದ್ದಾರೆಯೇ ವಿನಾ ನಾನು ರಾಜಕೀಯ ದ್ವೇಷ ಸಾಧಿಸಲು ಇಲ್ಲಿಗೆ ಬಂದಿಲ್ಲವೆಂದು ಜೆ.ಕೆ. ಕೃಷ್ಣಾರೆಡ್ಡಿ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement