ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 6 Jan 2014, 11:26 am

ನಾಳೆ ಪ್ರಗತಿ ಪರಿಶೀಲನಾ ಸಭೆ
ಚಿಕ್ಕಬಳ್ಳಾಪುರ: ನೂತನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜ.8 ರಂದು ಬೆಳಗ್ಗೆ 10.30 ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ  ಎಚ್.ಕೆ. ಪಾಟೀಲ್ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ವಿವಿಧ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಲಿದ್ದಾರೆಂದು ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಶಿಬಿರ
ಚಿಕ್ಕಬಳ್ಳಾಪುರ: ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಇಲಾಖೆಯಿಂದ ಕಾಗದ ಹಾಗೂ ಅಡಕೆ ಪಟ್ಟೆಯಲ್ಲಿ ತಟ್ಟೆ ಹಾಗೂ ಲೋಟಗಳನ್ನು ತಯಾರಿಸುವ ಬಗ್ಗೆ 5 ದಿವಸಗಳ ಅಲ್ಪಾವಧಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಜ.27 ರಿಂದ ಜ.31 ರವರೆಗೆ ತರಬೇತಿ ನೀಡಲಾಗುತ್ತದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು,ಜನ್ಮ ದಿನಾಂಕ, ವಿದ್ಯಾರ್ಹತೆ,ವಯಸ್ಸು, ತಂದೆ ಗಂಡನ ಹೆಸರು, ವೈವಾಹಿಕ ಸ್ಥಿತಿ, ವಿಳಾಸ, ಮೊಬೈಲ್ ಸಂಖ್ಯೆ,ಇ ಮೇಲ್ ಐಡಿ, ಅನುಭವ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ನಿರ್ದೇಶಕರು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ಅಭಿವೃದ್ಧಿ ಸಂಸ್ಥೆ, ರಾಜಾಜಿನಗರ, ಬೆಂಗಳೂರು-560010 ವಿಳಾಸಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿ.ವಿ. ಪ್ರಸಾದ್, ಉಪನಿರ್ದೇಶಕರು, ದೂ.ಸಂ 080-23151581-3 ರಲ್ಲಿ ಅಥವಾ ಕೆ. ಕಂದಸ್ವಾಮಿ, ಸಹಾಯಕ ನಿರ್ದೇಶಕರು, ಮೊ- 8971828533 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಾಲೂರು ಪ್ರೌಢಶಾಲೆಯಲ್ಲಿ ಅಣುಕು ಸಂಸತ್
ಮಾಲೂರು: ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕಿನ ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಅಣುಕು ಸಂಸತ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವಿದ್ದ ಮಕ್ಕಳ ಸಂಸತ್‌ನಲ್ಲಿ ಸ್ಪೀಕರ್ ನಿಯಂತ್ರಣದಲ್ಲಿ ಸಭೆ ನಡೆಯಿತು. ರಾಜ್ಯದ ಹಲವು ಕಡೆ ಕಾಡುತ್ತಿರುವ ಕುಡಿಯುವ ನೀರು, ಮಂತ್ರಿಗಳು ಐಷರಾಮಿ ಕಾರುಗಳನ್ನು ಬಿಟ್ಟು ಸೈಕಲ್ ಹೆಚ್ಚಾಗಿ ಉಪಯೋಗಿಸಿ ಇಂಧನ ಉಳಿತಾಯಕ್ಕೆ ಸಹಕಾರ ನೀಡುವ ಬಗ್ಗೆ, ಕೈಗಾರಿಕೆಯಿಂದ ಜನತೆ ಆಗುತ್ತಿರುವ ಲಾಭ-ನಷ್ಟದ ಬಗ್ಗೆ ಚರ್ಚಿಸಲಾಯಿತು.
ಈ ಅಣಕು ಸಂಸತ್ ಬಗ್ಗೆ ಸಭೆಯ ನಂತರ ಪತ್ರಕರ್ತರೊಡನೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯ, ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಂದ 48 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಯಶಸ್ವಿಯಾಗಿ ಚಟುವಟಿಕೆಯಿಂದ ಭಾಗವಹಿಸಿರುವ 8 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಕೋಲಾರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಅಣಕು ಸಂಸತ್ತಿನಲ್ಲಿ ಭಾಗವಹಿಸಲು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ವಿಜಯಕುಮಾರ್, ಮುಖ್ಯಾಪಾಧ್ಯಾಯಿನಿ ಫುಪ್ಬ ಭಟ್, ನಾಗಪ್ಪ ಇದ್ದರು.
ಶಿಕ್ಷಕರ ಸಂಘದ ಕ್ಯಾಲೆಂಡರ್ ಬಿಡುಗಡೆ
ಮುಳಬಾಗಲು: ಶಿಕ್ಷಕರು ಸಂಘ ಸಂಸ್ಧೆಗಳ ಹೆಸರಿನಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡದೇ ಕಾಲಹರಣ ಮಾಡದಿರಲು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಿಕ್ಷಕರ ಸಂಘದ ಕ್ಯಾಲೆಂಡರ್ 2014 ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿದರೆ ಶಾಲೆಗೆ ಒಳ್ಳೆಯ ಹೆಸರು ಬರುವುದು ಹಾಗೂ ಶಿಕ್ಷಕರ ಗೌರವ ಹೆಚ್ಚಾಗುವುದು ಎಂದು ನುಡಿದ ಅವರು, ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ನಿರ್ವಹಿಸಬೇಕು ಎಂದರು.
ಕೆಲವು ಶಿಕ್ಷಕರು ಅನ್ಯ ಚಟುವಟೆಕೆಗಳ ನಿಮಿತ್ತ ಓಡಾಡಿಕೊಂಡು ನಾಯಕತ್ವ, ಸಂಘ ಸಂಸ್ಥೆ, ಸಭೆ ಸಮಾರಂಭಗಳ ಹೆಸರಿನಲ್ಲಿ ವೃತ್ತಿ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಜಿ. ರಾಮಲಿಂಗಾರೆಡ್ಡಿ, ಎಂ.ಸಿ. ನೀಲಕಂಠೇಗೌಡ, ಸುಭಶ್‌ಕುಮಾರ್, ಆರ್. ರಾಜೇಂದ್ರಗೌಡ, ಕಲ್ಲುಪಲ್ಲಿ ಪ್ರಕಾಶ್, ಜಗನ್ ಮೋಹನ್ ರೆಡ್ಡಿ, ನಾರಾಯಣಪ್ಪ, ಶ್ರೀನಾಥ್, ಜಗನ್ನಾಥ್, ಎಂ. ಶಿವಣ್ಣ, ಸಿದ್ಧಲಿಂಗಯ್ಯ, ಜನಾರ್ದನ್ ಮತ್ತಿತರರು ಇದ್ದರು.
ಶಿಕ್ಷಣದಿಂದ ಉನ್ನತ ಸಾಧನೆ ಸಾಧ್ಯ; ಪಾರ್ವತಮ್ಮ
ಗೌರಿಬಿದನೂರು: ಶಿಕ್ಷಣವೆಂಬುದು ಶಕ್ತಿಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವಂತೆ ತಾಪಂ ಉಪಾಧ್ಯಕ್ಷೆ ಪಾರ್ವತಮ್ಮ ಮಕ್ಕಳಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಡಾ. ಎಚ್.ಎನ್. ನ್ಯಾಷನಲ್ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಡಾ. ಎಚ್.ಎನ್. ಸುಬ್ರಹ್ಮಣ್ಯ ಮಾತನಾಡಿದರು.  ಅಧ್ಯಾಪಕ ಕಾರ್ಯದರ್ಶಿ ಎಚ್.ವಿ. ವೆಂಕಟೇಶ್ ಸ್ವಾಗತಿಸಿದರು.  ಶಿಕ್ಷಕರಾದ ಐ.ಎಸ್. ಸಿದ್ದರಾಮಣ್ಣ ವಂದಿಸಿದರು. ಗಣೇಶ ಶೆಟ್ಟಿ ನಿರೂಪಿಸಿದರು. 129 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement