ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಮನ ಸೆಳೆದ ಯುವಜನ ಮೇಳ

Vishwanath S
Updated On : 8 Jan 2014, 1:07 am

ಟೇಕಲ್: ಕೋಲಾರ ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೊಡ್ಡಮಲ್ಲೆ ತಾಯಿಬೇರು ಜಾನಪದ ಕಲಾ ತಂಡ ಇವರ ಸಂಯುಕ್ತ ಆಶ್ರಯದಲ್ಲಿ 2013-14ರ ಮಾಲೂರು ತಾಲ್ಲೂಕು ಮಟ್ಟದ ಯುವಜನ ಮೇಳವನ್ನು ಟೇಕಲ್‌ನ ಕೆ.ಜಿ.ಹಳ್ಳಿ ಸ.ಹಿ.ಪ್ರ. ಶಾಲೆಯ ಆವರಣದಲ್ಲಿ ನಡೆದ ಹಿನ್ನಲೆಯಲ್ಲಿ ಯುವಜನ ಮೇಳದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಜಿಲ್ಲೆಯ ಈ ಭೂಮಿ ತಮಟೆಯ ಮಂಜು, ರಂಗಭೂಮಿ ಕಲಾವಿದ ಹರೀಶ್ ಅಧೀಮ, ಡಿ.ಎನ್. ಗೋಪಿನಾಥ್, ಪತ್ರಕರ್ತರು ಹಾಗೂ ಸಾಹಿತಿಗಳು ಸಿ.ಎಂ. ಶಂಕರ್, ಜಾನಪದ ಕಲಾವಿದೆ ಗಾನಸುಧಾ ಕೆ.ಗೌತಮ್, ಜಿ.ನಾಗರಾಜ್, ಶಂಭಾಮೂರ್ತಿ, ಟಿ. ಚಂದ್ರಮ್ಮ ಇವರುಗಳಿಗೆ ಶಾಲೂ ಹೊದಿಸಿ ಮಾಜಿ ತಾ.ಪಂ.ಕೆ.ವೈ.ನಂಜೇಗೌಡರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಾರ್ಜೇನಹಳ್ಳಿ ಆರ್. ಮುನಿಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶಪ್ಪ, ಹೊಳೂರು ಕರವೇಯ ನವೀನ್, ಕೆ.ಜಿ.ಹಳ್ಳಿ ಗ್ರಾ.ಪಂ.ನ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್, ತಾ.ಪಂ. ಸದಸ್ಯೆ ಮಂಜುಳಾ ವೆಂಕಟೇಶ್, ಮುಖಂಡರಾದ ಕ್ಷೇತ್ರೇನಹಳ್ಳಿ ಕೆ.ಎಸ್. ವೆಂಕಟೇಶ್, ಬಿ.ಜಿ.ಸತೀಶ್, ದೊಡ್ಡಮಲ್ಲೆ ಮುನಿರಾಜು, ಸಿ. ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು. ಯುವಜನ ಮೇಳದಲ್ಲಿ ನೃತ್ಯ, ಕೋಲಾಟ, ಭಾವಗೀತೆ, ರಾಗಿಬೀಸುವ ಪದ, ಲಾವಣಿ, ಸೋಭಾನ ಪದ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮುಂತಾದ ಸ್ಪರ್ಧೆಗಳಲ್ಲಿ ಕಲಾವಿದರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement