ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಿಯು ಶುಲ್ಕ ಏರಿಕೆ ಖಂಡಿಸಿ ಧರಣಿ

Vishwanath S
Updated On : 8 Jan 2014, 1:06 am

ಕೋಲಾರ: ರಾಜ್ಯದ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಶುಲ್ಕ ಶೇ.20ರಷ್ಟು ಏರಿಸಿ ಆದೇಶ ಹೊರಡಿಸಿರುವುದನ್ನು ಖಂಡಿಸಿ ಎಸ್‌ಎಫ್‌ಐ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಈ ಶುಲ್ಕ ಏರಿಕೆಯಿಂದ ಬಡ, ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶುಲ್ಕ ಏರಿಕೆ ನೀತಿಯಿಂದ  ಶಿಕ್ಷಣದಿಂದ ದೂರ ಉಳಿಯುವ ಅಪಾಯಗಳಿವೆ. ಅಲ್ಲದೆ, ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದೆ. ರೈತ, ಕೃಷಿ-ಕಾರ್ಮಿಕರು ಜೀವನ ನಡೆಸಲು ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಈಗ ಶುಲ್ಕ ಏರಿಕೆಯಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದರು.
ವಿದ್ಯಾರ್ಥಿಗಳ ದಾಖಲಾತಿ, ನೋಂದಣಿ, ಬೋಧನೆ, ಪ್ರಯೋಗಶಾಲೆ, ವಿಳಂಬ ದಾಖಲಾತಿ ದಂಡ ಶುಲ್ಕ, ವಿಶೇಷ ವಿಳಂಬ ದಾಖಲಾತಿ ದಂಡ ಶುಲ್ಕ, ಕ್ರೀಡಾ ಶುಲ್ಕ, ಪಠ್ಯೇತರ ಚಟುವಟಿಕೆ ಶುಲ್ಕ, ಗ್ರಂಥಾಲಯ ಶುಲ್ಕ, ವಿದ್ಯಾರ್ಥಿಗಳ ಕಲ್ಯಾಣ ನಿಧಿ, ಶಿಕ್ಷಕರ ಕಲ್ಯಾಣ ನಿಧಿ, ಶೌಚಾಲಯ, ನೀರಿನ ಶುಲ್ಕ ಸೇರಿ ರು. 3732 ಇರುವ ಶುಲ್ಕವನ್ನು ರು. 4485ಕ್ಕೆ ಹೆಚ್ಚಿಸಲಾಗಿದ್ದು, ಪ್ರಥಮ ಪಿಯು ಪ್ರಾಯೋಗಿಕ ಪ್ರತಿ ವಿಷಯಕ್ಕೆ ರು. 8, ಪರೀಕ್ಷಾ ಶುಲ್ಕ ರು. 28 ಮತ್ತು ದ್ವಿತೀಯ ಪಿಯು ಪ್ರಾಯೋಗಿಕ ಪ್ರತಿ ವಿಷಯಕ್ಕೆ ರು.14 ಪರೀಕ್ಷಾ ಶುಲ್ಕ ರು.17 ವಿಶೇಷ ದಂಡ ಶುಲ್ಕ ದಿನಕ್ಕೆ ರು. 50 ನಂತೆ  ಗರಿಷ್ಠ ರು. 20 ದಿನಕ್ಕೆ ರು.1000 ದಂಡ ಶುಲ್ಕ ಪಾವತಿಸಬೇಕಿದೆ ಎಂದು ದೂರಿದರು.
ಈ ರೀತಿ ಶುಲ್ಕವನ್ನು ಹೆಚ್ಚಿಸುವುದರ ಮೂಲಕ ರಾಜ್ಯದ ಕಾಂಗ್ರೆಸ್ಸ್‌ರ್ಕಾರ ಶಿಕ್ಷಣದ ವ್ಯಾಪರೀಕರಣದಲ್ಲಿ ಬಿಜೆಪಿ ಗಿಂತ ನಾನೇನು ಕಡಿಮೆ ಇಲ್ಲ ಎನ್ನುವಂತೆ ತನ್ನ ನಿಜ ಬಣ ಬಯಲು ಮಾಡಿದೆ ಎಂದು ಟೀಕಿಸಿದರು.
 ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಸಿ.ಅಮಪೇಶ್, ಜಿಲ್ಲಾ ಉಪಾಧ್ಯಕ್ಷ ಮೊಹಮದ್, ಜಿಲ್ಲಾ ಕಾರ್ಯದರ್ಶಿ ಮಾರ್ಕಂಡಯ್ಯ ಹಾಗೂ ಘಟಕ ಸದಸ್ಯ ಅಜಗರ್ ಮಹೇಶ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement