ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫ್ಲೋರೈಡ್ ನೀರಿನ ಭೀತಿ: ಜನರಿಗೆ ಗುಳೆಯೇ ಗತಿ

Vishwanath S
Updated On : 8 Jan 2014, 1:06 am

ಕೆಜಿಎಫ್: ಶಾಶ್ವತ ನೀರಾವರಿ ಯೋಜನೆಗೆ ಉತ್ತೇಜನ ಕೊಡಲು ರೈತ ಸಂಘದ ಗ್ರಾಮ ಘಟಕಗಳನ್ನು ಸ್ಥಾಪಿಸುತ್ತಿದ್ದು ಈಗಾಗಲೇ ಅಂತರ್ಜಲ ಕುಸಿದಿದ್ದು 1500 ಅಡಿಗಳು ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ.
ಒಂದು ವೇಳೆ ಸಿಕ್ಕ ಅಲ್ಪಸ್ವಲ್ಪ ನೀರು ಪ್ಲೋರೈಡ್ ಮಿಶ್ರಿತವಾಗಿದ್ದು ಕೋಲಾರ ಜಿಲ್ಲೆ ಸೇರಿದಂತೆ ಕೆಜಿಎಫ್ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಜನ ಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಜಿಲ್ಲೆಯ ಗ್ರಾಮಸ್ಥರು ಗುಳೇ ಹೋಗಲು ಪ್ರಾರಂಭಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣ ಬಳಗ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಹೇಳಿದರು.  
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೇತಮಂಗಲ ಹೋಬಳಿಯ ಬ್ಯಾಟರಾಯಣಹಳ್ಳಿ ಗ್ರಾಮದಲ್ಲಿ ರೈತ ಸಂಘ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಹುಲ್ಕೂರು ಹರಿಕುಮಾರ್ ಈ ಕೂಡಲೇ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲು ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಮುಂದಾಗಬೇಕು ಇಲ್ಲವಾದಲ್ಲಿ ರೈತ ಸಂಘ ಹಾಗೂ ಕೂಲಿ ಕಾರ್ಮಿಕರು ಒಗ್ಗೂಡಿ ಜಿಲ್ಲೆಯಾದ್ಯಂತ ಹೋರಾಟವನ್ನು ನಡೆಸುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಬ್ಯಾಟರಾಯಣಹಳ್ಳಿ ಗ್ರಾಮದಲ್ಲಿ ರೈತ ಸಂಘ ಘಟಕದ ಗೌರವ ಅಧ್ಯಕ್ಷರಾಗಿ ಕುಮಾರ್, ಅಧ್ಯಕ್ಷರಾಗಿ ರಘುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಚಲಪತಿ ಸೇರಿದಂತೆ ಇತರೆ ಸದಸ್ಯರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ದೊಡ್ಡಕಾರಿ ವಿಶ್ವನಾಥ್, ವಡ್ಡಹಳ್ಳಿ ಮಂಜುನಾಥ್, ಸುಬ್ರಮಣಿ, ಮಂಜುನಾಥ್, ಕರಗ ನಾರಾಯಣಸ್ವಾಮಿ, ವೆಂಕಟರಾಮರೆಡ್ಡಿ, ಮುನಿರಾಜು, ಅಜಮತ್ತುಲ್ಲಾ, ಅತಿಕ್‌ಅಹ್ಮದ್, ವೆಂಕಟೇಶ್, ಬಾಲಕೃಷ್ಣ, ಚಂದ್ರಪ್ಪ, ಕೃಷ್ಣಪ್ಪ, ರೋಷನ್‌ಬೇಗ್, ವಿಜೇಂದ್ರ, ಮುತ್ಯಾಲಗೌಂಡರ್, ಪಾಪಣ್ಣ, ಗಂಟ್ಲಪ್ಪ, ಶ್ರೀನಿವಾಸ್, ದೊರೆಸ್ವಾಮಿ, ಸುರೇಶ್, ವಿಶ್ವನಾಥ್, ಗಣೇಶ, ರವಿ, ಸುಬ್ರಮಣಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement