ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾಲೂಕಲ್ಲಿ ಭೂ ನುಂಗಣ್ಣರ ಜಾಲ: ತಹಸೀಲ್ದಾರ್ ಎಚ್ಚರಿಕೆ

Vishwanath S
Updated On : 9 Jan 2014, 1:27 am

ಮಾಲೂರು: ತಾಲೂಕಿನಲ್ಲಿ ಗೋಮಾಳ ಸೇರಿದಂತೆ ಸರ್ಕಾರಿ ಜಮೀನನ್ನು ನುಂಗುವ ಜಾಲವೊಂದು ತಲೆ ಎತ್ತಿದ್ದು, ಪಂಚಾಯ್ತಿ ಅಧಿಕಾರಿಗಳು ಈ ಸಂಬಂಧ ಎಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಹೇಳಿದರು. ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಜಮೀನು ಮೇಲೆ ಇಬ್ಬರು ವ್ಯಕ್ತಿಗಳು ಕೋರ್ಟ್‌ನಲ್ಲಿ ಒಬ್ಬರ ಮೇಲೆ ಒಬ್ಬ ಪ್ರಕರಣ ದಾಖಲಿಸಿ ನಂತರ ರಾಜೀ ಮಾಡಿಸಿಕೊಂಡಿದ್ದಾರೆ. ನಂತರ ತಹಸೀಲ್ದಾರ್ ಕಚೇರಿಯಲ್ಲಿ ಖಾತೆ ಮಾಡಿಸಿಕೊಳ್ಳುವ ದಂಧೆ ಮಾಡುತ್ತಿದ್ದಾರೆ ಎಂದ ಅವರು, ಪಂಚಾಯ್ತಿ ಅಧಿಕಾರಿಗಳು ಕೋರ್ಟ್ ಆದೇಶ ಸೇರಿದಂತೆ ಯಾವುದೇ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಖಾತೆ ಮಾಡುವ ಪ್ರಕರಣ ಬಂದಾಗ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು. ತಾಲೂಕಿನ ಗುಂಡಹಳ್ಳಿಯಲ್ಲಿ ಸರ್ಕಾರಿ ಜಮೀನಿನ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ತಾಲೂಕಿನ ದೂಂಬರಹಳ್ಳಿಯಲ್ಲಿ ನಡೆಯುತ್ತಿರುವ ಸರ್ವೆ ನಂತರ ಪಟ್ಟಣದಲ್ಲಿರುವ ತಾಪಂ ಆಸ್ತಿಗಳ ಸರ್ವೆ ಮಾಡಿಸಿಕೊಡುವುದಾಗಿ ತಿಳಿಸಿದರು.
ಕುಡಿವ ನೀರಿಗೆ 10 ಲಕ್ಷ: ತಮ್ಮ ಬಳಿ ಇರುವ ಬರಗಾಲ ನಿಧಿಯ ಹತ್ತು ಲಕ್ಷ ರು.ಗಳನ್ನು ತುರ್ತು ಸನ್ನಿವೇಶದಲ್ಲಿ ಕುಡಿಯುವ ನೀರಿಗಾಗಿ ಬಳಸುವುದಾದರೆ ಅ ಹಣವನ್ನು ನೀಡುವುದಾಗಿ ತಿಳಿಸಿದರು. ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement