ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಾಸ್ಯಕ್ಕೀಡಾದ ಅರ್ಚಕ ಗುಂಪಿನ ಮಾತಿನ ಚಕಮಕಿ

Vishwanath S
Updated On : 10 Jan 2014, 1:05 am

ಚಿಂತಾಮಣಿ: ಶಾಸಕರ ಸಮಕ್ಷಮ ಅರ್ಚಕರು 2 ಗುಂಪುಗಳಾಗಿ ಪರ ವಿರೋಧ ಮಾತಿನ ಚಕಮುಕಿ ನಡೆದು ಹಾಸ್ಯಕ್ಕೆ ಈಡಾದ ಘಟನೆ ಇಲ್ಲಿನ ಹರಿಹರೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ನಡೆದಿದೆ.
ನಗರದ ಆಜಾದ್‌ಚೌಕ ಬಳಿ ಇರುವ ಹರಿಹರೇಶ್ವಸ್ವಾಮಿ ದೇವಾಲಯದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕ ಆಗಮಿಕರ ಸಂಘದ ವತಿಯಿಂದ 2013-14 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಅಧ್ಯಕ್ಷ ಶ್ರೀನಿವಾಸಚಾರ್ಯ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಸಭೆ ಪ್ರಾರಂಭ ಮುನ್ನವೇ ಅರ್ಚಕರ ಪರ-ವಿರೋಧ ಮಾತಿನ ಚಕಮಕಿ ನಡೆದು ಶಾಸಕರ ಎದುರಿನಲ್ಲೇ ಪರಸ್ಪರ ನೂಕಾಟ-ತಳ್ಳಾಟ ನಡೆಯಿತು.
ನಡೆದಿದ್ದೇನು: ಮುಜರಾಯಿ ದೇವಾಲಯಗಳ ಅರ್ಚಕ, ಆಗಮಿಕರ ಸಂಘದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು.
    ಸಭೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ತಾಲೂಕಿನ ವಡ್ಡಹಳ್ಳಿ ವೀರಾಂಜನೇಯಸ್ವಾಮಿ ದೇವಾಲಯ ಅರ್ಚಕ ನರಸಿಂಹಮೂರ್ತಿ ಇನ್ನೂ ಹಲವರು ಸಭೆಗೆ ಬಂದು ಶಾಸಕರಿಗೆ ಸರ್ಕಾರದ ಅನುದಾನ ನೇರವಾಗಿ ಅರ್ಚಕರಿಗೆ ಸಿಗಲು ಕೋರಿ ಮತ್ತು 8 ಬೇಡಿಕೆ ಈಡೇರಿಸಲು ಗಮನಕ್ಕೆ ತರಲು ಮುಂದಾದಾಗ ಅಧ್ಯಕ್ಷ ಮಧ್ಯ ಪ್ರವೇಶಿಸಿ ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ಮನವಿ ಪತ್ರ ಸಲ್ಲಿಸಬಾರದೆಂದು ತಾಕೀತು ಮಾಡಿದಾಗ ಹಲವು ಅರ್ಚಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಾಗೂ ಮನವಿ ಪತ್ರ ಶಾಸಕರಿಗೆ ನೀಡಲು ಮುಂದಾದಾಗ ಎರಡು ಗುಂಪುಗಳ ನಡುವೆ ಶಾಸಕರ ಸಮಕ್ಷಮ ಮಾತಿನ ಚಕಮಕಿ ನಡೆದು ಪರಸ್ಪರ ನೂಕಾಟತಳ್ಳಾಟ ನಡೆಯಿತು.
ಇದರಿಂದ ಕೆಲ ಸಮಯ ಸಭೆ ಗೊಂದಲಮಯವಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
 ನಂತರ ಹಲವು ಹಿರಿಯ ಅರ್ಚಕರು ಮಧ್ಯ ಪ್ರವೇಶಿಸಿ ಶಾಂತಿಯಿಂದ ಸಭೆ ನಡೆಸಲು ಎಲ್ಲಾ ಅರ್ಚಕರು ಹಾಗೂ ಆಗಮಿಕರು ಶಾಂತಿಯಿಂದ ಸಭೆಯನ್ನು ನಡೆಸಿಕೊಡಲು ಕೋರಿದರು. ನಂತರ ಸಭೆ ಮುಂದುವರೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement