ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

13ರಂದು ಸಿದ್ಧರಾಮೇಶ್ವರ ಜಯಂತಿ

Vishwanath S
Updated On : 11 Jan 2014, 1:25 am

ಮಾಲೂರು: ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಕಾಲಾವಕಾಶದ ಕೊರತೆಯಿಂದ ಜ.13ರಂದು ತಾಲೂಕು ಆಡಳಿತ ವತಿಯಿಂದ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಹೇಳಿದರು.
ಸರ್ಕಾರದ ಆದೇಶದ ಸುತ್ತೊಲೆ ಬಹಳ ನಿಧಾನವಾಗಿ ಬಂದಿರುವುದರಿಂದ ಕೇವಲ 2 ದಿನಗಳಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ನಡೆಯಲು ಸಾಧ್ಯವಿಲ್ಲದ ಕಾರಣ ಸಾಂಕೇತಿಕವಾಗಿ ನಡೆಸುವ ಜತೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಪಟ್ಟಣದಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ನಡೆಸಲು ಸಮುದಾಯದವರು ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಲೋಕೇಶ್, ಹಿರಿಯ ಮುಖಂಡ ಹನುಮಪ್ಪ, ಶಿಕ್ಷಕರಾದ ಆಂಜಿನಪ್ಪ, ಚೌಡಪ್ಪ, ಸೋಮಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಸಮಾಜದಲ್ಲಿ ಸಾಧನೆ ಗೈದ ಸಾಮುದಾಯದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದರು.
ಸಿದ್ಧರಾಮೇಶ್ವರ ಸ್ವಾಮಿಗಳ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿದ್ಧರಾಮೇಶ್ವರ ಸ್ವಾಮಿಗಳ ಬಗ್ಗೆ ಮಾಹಿತಿ ನೀಡುವಂತೆ ಬಿಇಒ ಅವರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಬಿಇಒ ಸುಬ್ರಮಣ್ಯ, ಸಾಮುದಾಯದ ಮುಖಂಡರಾದ ಕಲ್ಲು ಸೀನಪ್ಪ, ಸಂಪಂಗಿ ರಾಮಯ್ಯ, ಮುನಿರಾಜು, ನಾರಾಯಣಪ್ಪ, ವೆಂಕಟೇಶ್, ವಿಜಯಲಕ್ಷ್ಮಿ, ಆನಂದ್, ಆಂಜಿನಪ್ಪ, ನಾರಾಯಣಸ್ವಾಮಿ, ಶ್ರೀನಿವಾಸಯ್ಯ, ಮುನಿಕೃಷ್ಣ, ಮುನಿನಾರಾಯಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement