ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಕ್ಷಕರು ಇಚ್ಛಾಶಕ್ತಿ ಮೆರೆಯಿರಿ: ರಾಮಸ್ವಾಮಿ ರೆಡ್ಡಿ

Vishwanath S
Updated On : 11 Jan 2014, 1:24 am

ಮಾಲೂರು: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸಬೇಕಾದರೆ ಶಿಕ್ಷಕರು ತಮ್ಮ ಇಚ್ಛಾಶಕ್ತಿಯನ್ನು ಮೆರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ ಅವರು ಹೇಳಿದರು.
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ ಬ್ಲಾಕ್ ಮಟ್ಟದ ಕಲಿಕೋತ್ಸವದಲ್ಲಿ ಮಾತನಾಡಿ, ಖಾಸಗಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಾಗುವ ಪೋಷಕರು ತಮ್ಮ ಮಕ್ಕಳ ಪ್ರತಿಭೆ ತೋರಿಸುವಂತಹ ಕಲಿಕೋತ್ಸವಕ್ಕೆ ನಿರ್ಲಕ್ಷ ತೋರುತ್ತಿರುವುದು ವಿಷಾದಕರ. ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳ ಪ್ರತಿಭೆಯ ಅನಾವರಣ ಮಾಡುವ ಜತೆಯಲ್ಲಿ ಪೋಷಕರ ಆಸಕ್ತಿಯನ್ನು ಶಾಲೆ ಕಡೆ ಬರುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ದೇಶದ ಪ್ರಗತಿಯು ಶಿಕ್ಷಕರ ಕರ್ತವ್ಯದ ಮೇಲೆ ಅವಲಂಬಿತವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗಿರುವ ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ನುಡಿದರು. ತಾಲೂಕು ಹೆಂಚು ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ಪರಮೇಶ್ ಮಾತನಾಡಿ, ಮಾತೃ- ಪಿತೃ- ಗುರುಗಳಿಗೆ ಗೌರವ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಕಡೆ ಸಾಗಲು ಸಾಧ್ಯ ಎಂದರು.
ಕಾರ್ಯಕ್ರಮ ನಂತರ ತಾಲೂಕಿನ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ನಾಟಕ- ನೃತ್ಯಗಳ ಮೂಲಕ ತೋರಿಸಿದರು. ಶಿಕ್ಷಣ ಇಲಾಖೆ ಕಲಿಕೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಮಕ್ಕಳಿಗೆ ಊಟದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯ, ಜಿ.ಪಂ. ಸದಸ್ಯೆ ಯಲ್ಲಮ್ಮ, ತಾ. ನೌ.ಸಂ.ಅಧ್ಯಕ್ಷ ಗುಂಡಪ್ಪ, ಅಶ್ವತ್ಥ್ ನಾರಾಯಣ್ ಗೌಡ, ಜಮೀರ್ ಪಾಷ, ಮುನಿನಾರಾಯಣ್, ಕೆಂಪಣ್ಣ, ಮುನಿರಾಜು,ನರಸಿಂಹ, ವೆಂಕಟಸ್ವಾಮಿ, ರವಿ, ದತ್ತ, ಉರ್ದು ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ ಯಾಸೀನ್, ಮುನಿಸ್ವಾಮಿ, ವೆಂಕಟೇಶ್, ಅಶ್ವತ್ಥ್ ನಾರಾಯಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement