ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನರೇಗಾ; ಜೆಸಿಬಿ ಬಳಕೆ ನಿಷೇಧಿಸಲು ಒತ್ತಾಯ

Vishwanath S
Updated On : 13 Jan 2014, 1:10 am

ಕೋಲಾರ: ಜಿಲ್ಲೆಯ್ಯಾದ್ಯಂತ ನರೇಗಾ ಯೋಜನೆಯ ಕಾಮಗಾರಿಗಳು ಜೆಸಿಬಿ ಯಂತ್ರಗಳ ಮೂಲಕ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ  ಹೇಳಿಕೆ ನೀಡಿ, ಬರಗಾಲ ಪ್ರದೇಶವಾದ ಕೋಲಾರ ಜಿಲ್ಲೆಯಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡಬೇಕು ಎಂಬ ಉದ್ದೇಶದಿಂದ ಉದ್ಯೋಗ ಚೀಟಿಗಳನ್ನು ನಿರುದ್ಯೋಗ ಫಲಾನುಭವಿಗಳಿಗೆ ನೀಡಲಾಗಿದೆ. ಆದರೆ ಉದ್ಯೋಗ ಚೀಟಿ ಪಡೆದ ನಿರುದ್ಯೋಗಿಗಳನ್ನು ಗುತ್ತಿಗೆದಾರರು ವಂಚಿಸಿ ಅವರಿಂದ ಚೀಟಿಯನ್ನು ಪಡೆದು ಹೆಚ್ಚಿನ ಬಿಲ್‌ಗಳನ್ನು ಸೃಷ್ಟಿಸಿ ಅನುದಾನ ಕಬಳಿಕೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮಹಾತ್ಮ ಗಾಂಧಿಜೀ ರಾಷ್ಟ್ರೀಯ ಯದ್ಯೋಗ ಖಾತರಿ ಯೋಜನೆಯ, ನರೇಗಾ, ಸುರ್ವಣ ಗ್ರಾಮ ಯೋಜನೆ ಅಡಿಯಲ್ಲಿ ರೈತ ಕೂಲಿ ಕಾರ್ಮಿಕರಿಗೆ 170 ರು. ಕೂಲಿ ಹಣವನ್ನು ನಿಗಧಿ ಮಾಡಲಾಗಿದೆ. ಗ್ರಾಮಗಳ ಕಲ್ಯಾಣಿ, ಕೆರೆ, ರಾಜಕಾಲುವೆ, ಚರಂಡಿ, ರಸ್ತೆಗಳ ಅಭಿವೃದ್ಧಿಪಡಿಸಲು ಈ ಯೋಜನೆಯ ಅಡಿಯಲ್ಲಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿ ತುಂಡುಗುತ್ತಿದೆ ನೀಡಲಾಗುತ್ತಿದೆ.
ಹುಲ್ಕೂರು ಹರೀಕುಮಾರ್, ಗುತ್ತಿಗೆದಾರರು ಸರ್ಕಾರವನ್ನು ವಂಚಿಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಲಿಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅತಂಕವ್ಯಕ್ತಪಡಿಸಿದರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ಕುಂಟೆಯ ಪುನಶ್ಚೇತಗೊಳಿಸಲು ಪ್ರಸ್ತುತ ಇದ್ದ ನೀರನ್ನು ಹೊರಗೆ ಪೋಲು ಮಾಡಿ ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement