ಶಾಲಾ ಮಕ್ಕಳಿಗೆ ಶಾಸಕರಿಂದ ಉಚಿತ ಸಮವಸ್ತ್ರ ವಿತರಣೆ
ಬಂಗಾರಪೇಟೆ; ಮುಂದಿನ ಶೈಕ್ಷಣಿಕ ವರ್ಷದಿಂದ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಎಸ್.ಎನ್.ಚಾರಿಟೇಬಲ್ ಟ್ರಸ್ಟ್ವತಿಯಿಂದ ಉಚಿತ ಸಮವಸ್ತ್ರ ನೀಡುವುದಾಗಿ ಶಾಸಕ ಹಾಗೂ ಟ್ರಸ್ಟಿನ ಅಧ್ಯಕ್ಷ ಎಸ್.ಎನ್. ನಾರಾಯಣಯಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಡವರಿದ್ದು ಅವರಿಗೆ ಪುಸ್ತಕ ಕೊಳ್ಳುವಷ್ಟು ಬಡತನವಿರುವುದರಿಂದ ಅಂತಹ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ಬರುವಂತೆ ಪ್ರೆರೇಪಿಸಲು ಒಂದೂವರೆ ಲಕ್ಷ ನೋಟ್ ಬುಕ್ಗಳನ್ನು ವಿತರಣೆ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ. ಪಾರ್ಥಸಾರಥಿ ಮಾತನಾಡಿದರು. ಮತ್ತೊಬ್ಬ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಪುರಸಭೆ ಸದಸ್ಯ ಕೆ. ಚಂದ್ರಾರೆಡ್ಡಿ,ಬಿ. ಹೊಸರಾಯಪ್ಪ, ಬಿಇಒ ಕೆ. ಜಯರಾಜ್, ಸಮನ್ವಯಾಧಿಕಾರಿ ಯುವರಾಜು, ಪಿಎಸ್ಐ ಯೋಗಾನಂದ್ ಇದ್ದರು.