ಸಮಯ ವ್ಯರ್ಥ ಮಾಡದಿರಿ: ಡಿಸಿ
ಕ.ಪ್ರ.ವಾರ್ತೆ , ಕೋಲಾರ , ಜ.12
ಪ್ರತಿಯೊಬ್ಬರಲ್ಲೂ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಬುದ್ದಿ ಇರುತ್ತದೆ. ಆದರೆ ಅದನ್ನು ಸಮಯ ವ್ಯರ್ಥ ಮಾಡಿಕೊಳ್ಳದೆ ಸಮರ್ಪಕವಾಗಿ ಬಳಸಿಕೊಂಡರೆ ಮುಂದಿನ ಜೀವನ ಸುಗಮವಾಗಿರುತ್ತದೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಕಿವಿಮಾತು ಹೇಳಿದರು.
ಅವರು ನಗರದ ಕಠಾರಿಪಾಳ್ಯ ರಸ್ತೆಯಲ್ಲಿರುವ ಎಸ್.ಎಲ್.ಎನ್ ಎಜ್ಯುಕೇಷನಲ್ ಟ್ರಸ್ಟ್ನ ಎಕ್ಸಲ್ಟ್ ಕೋಚಿಂಗ್ ಸೆಂಟರ್ನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ಪರ್ಧಾರ್ಥಿಗಳು ಪರೀಕ್ಷೆಗಳ ಬಗ್ಗೆ ಇರುವ ಅನುಮಾನಗಳನ್ನು ಪರಿಹಾರ ಮಾಡಿಕೊಂಡರು ಗುರಿ ಮುಟ್ಟಬೇಕೆಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಶಿವಣ್ಣ ಸಿ.ಕೆ ವಿವೇಕಾನಂದರು ವಿಶ್ವಕ್ಕೆ ಮಾದರಿ ಅವರ ಆದರ್ಶವನ್ನು ಪಾಲಿಸಬೇಕು ಪ್ರತಿ ಜಿಲ್ಲೆಯಲ್ಲಿ ಒಂದು ವಿವೇಕ ಗ್ರಾಮದ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯು ಸಹಕರಿಸಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದರು. ಉದ್ಯೋಧಿಕಾರಿ ಶ್ರೀನಿವಾಸ ಮಾತನಾಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ತೆಗೆದುಕೊಳ್ಳುತಿರುವುದರಿಂದ ಸ್ಪರ್ಧಾರ್ಥಿಗಳು ಪ್ರಾಮಾಣಿಕವಾಗಿ ಓದಿ ಗುರಿಮುಟ್ಟಬೇಕೆಂದರು.
ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೆಶಕ ಆರ್. ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಶ್ರೀನಿವಾಸ್ ಹಾಗೂ ನ್ಯಾಯಾಧೀಶರಾಗಿ ಆಯ್ಕೆಯಾದ ವಿ.ಎಲ್.ಅಮರ್ ಅವರನ್ನು ಸನ್ಮಾನಿಸಲಾಯಿತು.
ಖ್ಯಾತ ಗಣಿತತಜ್ಞ ಸಿ.ವಿ .ನಾರಾಯಾಣಸ್ವಾಮಿ, ಡಿ.ಜಿ.ಎಂ.ಪಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ.ಆರ್. ನಾಗಾರಾಜಗೌಡ, ಮುಖ್ಯ ಶಿಕ್ಷಕ ಬಾಲಾಜಿ, ಮುಖಂಡರಾದ ಕೈಲಾಸ್, ಸಂಪನ್ಮೂಲ ವ್ಯಕ್ತಿಗಳಾದ ಬೈರಪ್ಪ, ಎ.ಶ್ರೀನಿವಾಸ್, ಮತ್ತು ಸಂಸ್ಥೆಯ ಕಾರ್ಯದರ್ಶಿ ಪಿ. ಮುನಿರತ್ನಮ್ಮ ಇದ್ದರು. ಕೃತಿಕ ಸ್ವಾಗತಿಸಿ, ಕೆ.ರವಿಕಿರಣ್ ವಂದಿಸಿ, ಉಪನ್ಯಾಸ ಎನ್.ಕೆ. ತಿಮ್ಮರಾಯಪ್ಪ ನಿರೂಪಿಸಿದರು.