ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನಿಲ ಬಳಕೆದಾರರ ಪ್ರತಿಭಟನೆ

Vishwanath S
Updated On : 14 Jan 2014, 1:23 am

ಮಾಲೂರು: ಆಧಾರ್ ನೆಪವೊಡ್ಡಿ ಅನಿಲ ಸಿಲಿಂಡರ್‌ಗಳಿಗೆ 1,265 ರು.ಗಳನ್ನು ನೀಡಬೇಕೆಂದು ಅನಿಲ ಕಂಪನಿಗಳು ಸಿಲಿಂಡರ್ ನೀಡದೆ ಸತಾಯಿಸುತ್ತಿರುವುದನ್ನು ಖಂಡಿಸಿ ಅನಿಲ ಬಳಕೆದಾರರು ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳದ ಒಂದು ವಾರದಿಂದ ಆಧಾರ್ ಕಡ್ಡಾಯವಾಗಿ ಮಾಡಿಸಿ 1,265 ರು.ಗಳನ್ನು ನೀಡಬೇಕು ಎಂದು ತಿಳಿಸಿ ಸಿಲಿಂಡರ್ ವಿತರಿಸದೆ ಸತ್ತಾಯಿಸುತ್ತಿದ್ದಾರೆ ಎಂದು ಅರೋಪಿಸಿದರು. ಮಾರ್ಚ್‌ವರೆಗೂ ಆಧಾರ್ ಮಾಡಿಸಲು ಅವಕಾಶವಿದ್ದರೂ ಅನಿಲ ಕಂಪನಿಯವರು ಈಗಲೇ ಮಾಡಿಸಿ ಬ್ಯಾಂಕ್‌ನ ಖಾತೆ ನಂಬರ್ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ತಾಲೂಕಿನ ಗ್ರಾಮಗಳಲ್ಲಿ ಇನ್ನೂ ಆಧಾರ ಕಾರ್ಡ್ ಮಾಡಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಇಂತಹ ಸಂಧರ್ಭದಲ್ಲಿ ಅನಿಲ ನೀಡದ ಅನಿಲ ವಿತರಕರನ್ನು ಕರೆದು ಸಮಸ್ಯೆ ಬಗೆ ಹರಿಸಿಕೊಡಿ ಎಂದು ಪ್ರತಿಭಟನೆ ಸ್ಥಳಕ್ಕೆ ಬಂದಿದ್ದ ಆಹಾರ ಶಿರಸ್ತೇದಾರ ರಾಮಚಂದ್ರಯ್ಯರನ್ನು ಪ್ರತಿಭಟನೆಕಾರರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಆದೇಶದಂತೆ ಅನಿಲ ಕಂಪನಿಗಳು ನಡೆಯುತ್ತಿದ್ದು, ಆಧಾರ ಕಾರ್ಡ್ ಇಲ್ಲದಿದ್ದರೆ ಮುಂದಿನ ಎಪ್ರಿಲ್ ನಂತರ ಗ್ಯಾಸ್ ಸಿಲಿಂಡರ್‌ಗಳಿಗೆ ಸಬ್ಸಿಡಿ ಸಿಗುವುದಿಲ್ಲ ಎಂದು ಸಲಹೆ ನೀಡಿದರು. ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣ, ಕಲಾವಿದ ಸ್ವಾಮಿ,ನಾರಾಯಣಸ್ವಾಮಿ, ದಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement