ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ.ಪಂ ನೌಕರರ ಧರಣಿ ವಾಪಸ್

Vishwanath S
Updated On : 14 Jan 2014, 1:23 am

ಗುಡಿಬಂಡೆ: ಸುಮಾರು 3 ತಿಂಗಳಿಂದ ವೇತನ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಆಗ್ರಹಿಸಿ ಸ್ಥಳೀಯ ಪಪಂನಲ್ಲಿ ದಿನಗೂಲಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯು ಅಧಿಕಾರಿ ಭರವಸೆ ಮೇರೆಗೆ ಸ್ಥಗಿತಗೊಂಡಿತು.
ಸ್ಥಳೀಯ ಪ.ಪಂ.ನಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನದಡಿಯಲ್ಲಿ 16 ನೌಕರರು, ದಿನಗೂಲಿ ವೇತನದಡಿಯಲ್ಲಿ 13 ನೌಕರರ ಹಾಗೂ ಗುತ್ತಿಗೆ ಆಧಾರದಲ್ಲಿ 7 ನೌಕರರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಕ್ರಮವಾಗಿ ವೇತನ ಪಾವತಿಸುವಲ್ಲಿ ವಿಳಂಭವಾದ್ದರಿಂದ ಅನಿರ್ದಿಷ್ಟಾವಧಿ ಧರಣಿಗೆ ನೌಕರರು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಮುರಳ, ಕಾರ್ಯದರ್ಶಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಅವರ ಜೊತೆ ಚರ್ಚಿಸಿ ಸದ್ಯಕ್ಕೆ 3 ತಿಂಗಳ ವೇತನ ಪಾವತಿಸುವ ಭರವಸೆ ನೀಡಿದರು. ಅಧಿಕಾರಿ ನೀಡಿದ ಭರವಸೆಗೆ ಒಪ್ಪಿದ ನೌಕರರು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಈ ವೇಳೆ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗಂಗಪ್ಪ, ಉಪಾಧ್ಯಕ್ಷ ಅಶ್ವತ್ಥಪ್ಪ, ಕಾರ್ಯದರ್ಶಿ ಚಿಕ್ಕಮುನಿಸ್ವಾಮಿ, ಖಜಾಂಚಿ ಉಸ್ಮಾನ್ ಬೇಗ್, ಎನ್.ಶಂಕರಪ್ಪ, ಜಯಮ್ಮ, ಸುಬ್ರಮಣಿ, ಎನ್.ಪದ್ಮನಾಭ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement