ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನಧಿಕೃತ ಫ್ಲೆಕ್ಸ್‌ಗಳಿಂದ ಸಂಚಾರಕ್ಕೆ ಅಡ್ಡಿ

Vishwanath S
Updated On : 16 Jan 2014, 1:34 am

ಮಾಲೂರು: ಗ್ರಾಮ ದೇವತೆ ಮಾರಿಕಾಂಭ ದೇವಾಲಯದ ಮಹಾದ್ವಾರವು ಸಂಪೂರ್ಣ ಫ್ಲೆಕ್ಸ್‌ಗಳಿಂದ ಮುಚ್ಚಿಹೋಗಿದ್ದು, ಸುಗುಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಕ್ರಮವಾಗಿ ಹಾಕಿರುವ ಇವುಗಳನ್ನು ತೆರವುಗೊಳಿಸದ ಇಲ್ಲಿನ ಪುರಸಭೆಯ ನಿರ್ಲಕ್ಷತನ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಪಟ್ಟಣದ ಡಬ್ಬಲ್ ರಸ್ತೆ ಸೇರಿದಂತೆ ಮಾರಿಕಾಂಭ ಮಹಾದ್ವಾರ ಹಾಗೂ ಸೌಧದ ಮುಂಭಾಗಗಳಲ್ಲಿ ಬಹಳ ಫ್ಲೆಕ್ಸ್‌ಗಳನ್ನು ಪುರಸಭೆ ಅನುಮತಿ ಪಡೆಯದೆ ರಸ್ತೆ ಸಂಚಾರಕ್ಕೆ ಅಡ್ಡಲಾಗಿ ಬೇಕಾಬಿಟ್ಟಿಯಾಗಿ ಕಟ್ಟಿದ್ದರೂ,ಪುರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ.  ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸರಾಶಿ ಜತೆಯಲ್ಲಿ ಫ್ಲೆಕ್ಸ್‌ಗಳ ಭರಾಟೆ ಹೆಚ್ಚಾಗಿದ್ದು, ಇವು ಇಲ್ಲಿನ ಅಂದವನ್ನೇ ಹಾಳುಗೆಡವುತ್ತಿದೆ.
ಕಾರ್ಯಕ್ರಮ ನಡೆಯುವ ತಿಂಗಳ ಮುಂಚೆಯೇ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಈ ಹಿಂದಿನ ಪುರಸಭೆ ಆಡಳಿತ ಬಸ್‌ನಿಲ್ದಾಣದಲ್ಲಿರುವ ಉದ್ಯಾನವನ ಕಾಂಪೌಂಡ್ ಹಾಗೂ ಮಾರಿಕಾಂಭ ಮಹಾದ್ವಾರದ ಮೇಲೆ ಫ್ಲೆಕ್ಸ್ ಹಾಕಬಾರದು ಎಂದು ಆದೇಶ ಹೊರಡಿಸಿತ್ತು. ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸಬೇಕಾದಲ್ಲಿ ಪುರಸಭೆ ಅನುಮತಿ ಅಗತ್ಯ ಎಂದು ಆದೇಶಿಸಿತ್ತು. ಆದರೆ ಈಗ ಆ ಆದೇಶಕ್ಕೆ ಬೆಲೆಯೇ ಇಲ್ಲ.  ಪಟ್ಟಣದಲ್ಲಿ ಈಗ ಹಾಕಲಾಗಿರುವ ಬಹುತೇಕ ಫ್ಲೆಕ್ಸ್‌ಗಳಲ್ಲಿ ಶಾಸಕರ ಭಾವಚಿತ್ರ ಇರುವುದರಿಂದ ಅವುಗಳನ್ನು ತೆರವುಗೊಳಿಸಲು ಹಿಂಜರಿಕೆ ಉಂಟಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪುರಸಭೆ ಅಧಿಕಾರಿಯೊಬ್ಬರು ಹೇಳುತ್ತಾರೆ. ಹಾಗಾದರೆ ಇದನ್ನು ಹಾಗೆಯೇ ಬಿಡಲಾಗುತ್ತದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement